ಗಂವಾರ್ ಗ್ರಾಮ ಪಂಚಾಯತ ಅಂಗವಿಕಲರ ಅನುದಾನ ಲೂಟಿ: ತನಿಖೆಗೆ ಆಗ್ರಹ
ಕಲಬುರಗಿ,ಸೆ.10- ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವಾರ್ ಗ್ರಾಮ ಪಂಚಾಯಿತಿಯ 15 ನೇ ಹಣಕಾಸು ಆಯೋಗದಡಿಯ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣವನ್ನು ಲೂಟಿ ಮಾಡಿಡುವ ಮೂಲಕ ದುರ್ಬಳಕೆ ಮಾಡಿಕೊಂಡಿರುವ ಗಂವ್ಹಾರ ಗ್ರಾಮ ಪಂಚಾಯತ ಅಭಿವೃಧಿ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಳುವಂತೆ ವೀರ ಕನ್ನಡಿಗರ ಸೇನೆ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಆಯೋಗದಡಿಯಲ್ಲಿ 2023-24 ನೇ ಮತ್ತು 2024- 25 ನೇ ಸಾಲಿನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣವನ್ನು ನಖಲಿ ಬಿಲ್ ದಾಖಲೆಗಳ ಮೂಲಕ ಗಂವ್ಹಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಸೇರಿ ಲೂಟಿ ಮಾಡಿದ್ದಾರೆ ಈ ಕುರಿತು ಸಮಗ್ರ ತನಿಖೆಗೆ ಆದೇಶ ನೀಡುವಂತೆ ತಮ್ಮ ಮನವಿಯಲ್ಲಿ ಅವರು ದೂರಿದ್ದಾರೆ.
ವಿಕಲ ಚೇತನರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣ ಬೇರೆ ಅನ್ಯ ಕೆಲಸಕ್ಕೆ ಬಳಕೆಯಾಗಿದೆ ಎಂದು ಪಿಡಿಓ ಅವರು, ಉಡಾಫೆ ಉತ್ತರ ನೀಡುತ್ತಾರೆ. ಈ ಮೀಸಲು ಅನುದಾನದ ಹಣ ಬೇರೆ ಕೆಲಸಕ್ಕೆ ಬಳಕೆ ಮಾಡಲು ಅವಕಾಶವಿದೆಯೇ? ಎಂದು ಪ್ರಶ್ನಿಸಿರುವ ಅವರು, ಇಲಾಖೆಯ ಮೇಲಾಧಿಕಾರಿಗಳು ಈ ಕೂಡಲೇ ಸ್ಪಷ್ಟಪಡಿಸಬೇಕು. ಅಲ್ಲದೆ 15ನೇ ಹಣಕಾಸು ಆಯೋಗದಡಿಯಲ್ಲಿ ಯಾವುದೇ ಕೆಲಸ ಮಾಡದೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿದ್ದಾರೆ.
ಇಲ್ಲಿನ ನಡೆದಿರುವ ಅಕ್ರಮ ಅನುದಾನದ ಹಣದ ಲೂಟಿ ನಿರತರವಾಗಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಸೂಕ್ತ ಕ್ರಮ ಕೊನೆಗೊಂಡು ತನಿಕೆಗೆ ಆದೇಶ ನೀಡಬೇಕೆಂದು ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸೇನೆಯ ಮುಖಂಡರಾದ ರವಿ ಒಂಟಿ, ಶಿವಾನಂದ ಚಿಕ್ಕಾಣಿ, ಆಬೀಷೇಕ ತಳಂಗೆ, ಅಣವೀರ ಬಿರಾದಾರ, ಸೇರಿದಂತೆ ಹಲವರಿದ್ದರು.