ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕಲಬುರಗಿ,ಸೆ.10-ಹೀರಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಹೀರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ.
ನಾಲ್ಕನೇ ವರ್ಗದ ಕು.ಉಮಾ ದೇಶಭಕ್ತಿಗೀತೆಯಲ್ಲಿ ಪ್ರಥಮ, ಕು.ಮೇಘಾ ಭಕ್ತಿಗೀತೆಯಲ್ಲಿ ಪ್ರಥಮ, 5ನೇ ವರ್ಗದ ಕು.ಖುಷಿ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ, 7ನೇ ವರ್ಗದ ಕು.ಗಾಯತ್ರಿ ಹಿಂದಿ ಕಂಠಪಾಠದಲ್ಲಿ ದ್ವಿತೀಯ, 5ನೇ ವರ್ಗದ ಕು.ಭೂಮಿಕಾ ಭಕ್ತಿಗೀತೆಯಲ್ಲಿ ದ್ವಿತೀಯ, 7ನೇ ವರ್ಗದ ಕು.ಮಮತಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ, 6ನೇ ವರ್ಗದ ಕು.ಸೌಮ್ಯ ಅಭಿನಯ ಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಣೋಜಿ ಎಂ.ಡೆಪ್ಯೂಟಿ, ಮುಖ್ಯಗುರುಗಳು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಮಕ್ಕಳಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.