ಪ್ರಶಿಕ್ಷಣಾರ್ಥಿ ತರಬೇತಿ ಕಾರ್ಯಾಗಾರ ಉದ್ಘಾಟನೆ
ಕಲಬುರಗಿ,ಸೆ 10: ನಗರದ ರೇಷ್ಮೆ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಬರುವ ಶ್ರೀ ಮುರುಘ ರಾಜೇಂದ್ರ ಸ್ವಾಮಿಜಿ ಬಿ.ಇಡಿ ಆ್ಯಂಡ್ ಎಂ.ಇಡಿ ಶಿಕ್ಷಣ ಮಹಾವಿದ್ಯಾಲಯಹಾಗೂ ಕುಮಾರಿ ಶರಣೇಶ್ವರಿ ರೇಷ್ಮೆ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಉನ್ನತಿಫೌಂಡೇಷನ್ ಸಹಯೋಗದಲ್ಲಿ 30 ದಿನಗಳ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ರೇಷ್ಮೆ ಶಿಕ್ಷಣಸಂಸ್ಥೆಯ ಆಡಿಟೋರಿಯಂ ಹಾಲ್‍ನಲ್ಲಿ ಉನ್ನತಿ ಫೌಂಡೇಷನ್ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಮತ್ತು ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೀತಾ ಆರ್.ಎಂ. ರವರು ಸಸಿಗೆ ನೀರುಣಿಸುವುದರ ಮೂಲಕ ನೆರವೇರಿಸಿದರು.
ತರಬೇತಿಯಲ್ಲಿ ಕೈಗೊಳ್ಳುವ ಬೋಧನಾ ಚಟುವಟಿಕೆಗಳಾದ ಇಂಗ್ಲೀಷ್ ಭಾಷಾ
ಸಂವಹನಾ ಕೌಶಲ್ಯಗಳು, ಜೀವನ ಕೌಶಲ್ಯ ಇವುಗಳಿಗೆ ಸಂಬಂಧಿಸಿದಂತೆ ಡಾ. ಗೀತಾ ಆರ್.ಎಂ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಉದ್ದೇಶ ಮತ್ತು ಮಹತ್ವ ಕುರಿತು ಮನವರಿಕೆಮಾಡಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಚೆಂಜ್ ಮೇಕರ್ ನವರು ಮೊದಲದಿನದ ಬೋಧನಾ ಚಟುವಟಿಕೆಗಳಾದ ಚಟುವಟಿಕೆಯೊಂದಿಗೆ ಇಂಗ್ಲೀಷ್ ಭಾಷೆಯನ್ನು
ಸರಳವಾಗಿ, ಸುಲಲಿತವಾಗಿ ಹೇಗೆ ಕಲಿಯಬೇಕು, ಹೇಗೆ ಕಲಿಸಬೇಕು ಎಂಬುದರ ಕುರಿತು ವಿವರಿಸಿದರು.
ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳ ನಿಯುಕ್ತಿ ಸಂಯೋಜಕರಾದ ಶರಣಪ್ಪ ಚವ್ಹಾಣ, ಸಹಸಂಯೋಜಕರಾದ ಪ್ರಭಾವತಿ, ಸಹಾಯಕ ಪ್ರಾಧ್ಯಾಪಕರಾದ ಶಿವಲೀಲಾ, ಶ್ವೇತಾ ಬಿರಾದಾರ, ಎಲ್ಲಾ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು.