ವಿಮಾ ಸಂಸ್ಥಾಪನ ಸಮಾರೋಪ
ಕಲಬುರಗಿ,ಸೆ 10: ನಗರದ ಭಾರತೀಯ ಜೀವ ವಿಮಾ ಶಾಖೆ 2 ರಲ್ಲಿ 68ನೇ ವಿಮಾ ಸಂಸ್ಥಾಪನದ ಸಮಾರೋಪ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಹಿರಿಯ ವ್ಯವಸ್ಥಾಪಕ ಜಿ ರಮೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿವೈಎಸ್ಪಿ ವಿಜಯಕುಮಾರ್ ಹಾಗೂ ಶಾಖೆಯ ಹಿರಿಯ ಆಡಳಿತ ಅಧಿಕಾರಿ ಭಾರತಿ ಪಠವಾರಿ ಆಗಮಿಸಿದರು.
ವಿಮಾ ಸಪ್ತಾಹದಲ್ಲಿ ಆಯೋಜನೆ ಮಾಡಿರುವ ಅನೇಕ ಶಾಲೆಯ ಮಕ್ಕಳಿಗೆ, ಸಿಬ್ಬಂದಿಗಳಿಗಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಗುರುತಿಸಿ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಸನ್ಮಾನಿಸಿ ಬಹುಮಾನ ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾದ ಡಿವೈಎಸ್ಪಿ ವಿಜಯಕುಮಾರ್ ತಮ್ಮ ಭಾಷಣದಲ್ಲಿ ವಿಮಾ ಕುರಿತು ಎಲ್ ಐಸಿ ದೇಶದಲ್ಲಿ ಏಕೈಕ ಬೃಹತ್ತ ವಿಮಾ ಸಂಸ್ಥೆ ಹಾಗೂ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೆ ಭರವಸೆ, ಪ್ರಾಮಾಣಿಕತೆಯಿಂದ ನೀಡುತ್ತಿರುವ ಸೇವೆ ಹಾಗೂ ಜೀವನ ಭದ್ರತೆಗಾಗಿ ಎಲ್ ಐಸಿ ಅತಿ ಪ್ರಮುಖ ಪಾತ್ರ ವಹಿಸುತ್ತಿದೆ.
36 ಕೋಟಿಯಷ್ಟು ಪಾಲಿಸಿದಾರರು, 15 ಲಕ್ಷ ಪ್ರತಿನಿಧಿಗಳನ್ನು , 1 ಲಕ್ಷಕ್ಕಿಂತ ಅಧಿಕ ನೌಕರರನ್ನು ಹೊಂದಿದ್ದು ದೇಶದ ತುಂಬೆಲ್ಲ ಸಾವಿರಾರು ಶಾಖೆಗಳನ್ನು ನಿರ್ಮಿಸಿರುವ ದೊಡ್ಡ ಭರವಸೆಯ ಸಂಸ್ಥೆ ಎಲ್ ಐ ಸಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಾಖೆಯ ಸರ್ವ ಸಿಬ್ಬಂದಿಗಳು, ಶಾಲಾಮಕ್ಕಳು, ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದರು. ಮಂಜುನಾಥ ನಿರೂಪಣೆ ಮಾಡಿದರು. ಸಹಾಯಕರಾಗಿ ಮಾಂತೇಶ್ ಕಣ್ಣಿ ಇದ್ದರು