ಟಂಟಂ ಬೈಕ್ ಮಧ್ಯ ಡಿಕ್ಕಿ:ಮುಖ್ಯ ಶಿಕ್ಷಕ ಸ್ಥಳದಲ್ಲೆ ಸಾವು
ಯಡ್ರಾಮಿ:ಸೆ.10:ಟಂಟಂ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮುಖ್ಯ ಶಿಕ್ಷಕ ಶಿವಪ್ಪ ತಂದೆ ಭೀಮಪ್ಪ ಚಟ್ಟರ್ಕಿ 58 ವರ್ಷದ ವ್ಯಕ್ತಿ ಸ್ಥಳದಲೇ ಮೃತಪಟ್ಟಿದ್ದಾನೆ.
ಸೋಮವಾರ ಮದ್ಯಾನ ಯಡ್ರಾಮಿ ಸುಬಂಡ ಗ್ರಾಮದ ಮದ್ಯೆ ಬೈಕ್ ಸವಾರನು ಅತೀ ವೇಗವಾಗಿ ಬಂದು ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿದ್ದಾರೆ.ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.
ಶಿವಪ್ಪ ತಂದೆ ಭೀಮಪ್ಪ ಹಂಗರಗಾ (ಕೆ ) ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಮುಗಿಸಿಕೊಂಡು ಟಂಟಂನಲ್ಲಿ ಬರುವ ವೇಳೆಯಲ್ಲಿ ಅಪಘಾತವಾಗಿ ಮೃತದುರ್ಥೈವಿಯಾಗಿದ್ದಾರೆ.
ಮೃತ ಮುಖ್ಯಗುರುಗಳು ಮೂಲತಹ ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಟ್ಟರ್ಕಿ ಗ್ರಾಮದವರು ಆಗಿದ್ದು ಇವರಿಗೆ ಮೂರು ಗಂಡು ಮತ್ತು ಎರಡೂ ಹೆಣ್ಣು ಮಕ್ಕಳು ಇದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಯಡ್ರಾಮಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .