ಮೌನ ವೃತದಲ್ಲಿ ಅಪಾರ ಶಕ್ತಿ ಅಡಗಿದೆ:ಜಗದ್ಗುರು
ತಾಳಿಕೋಟೆ:ಸೆ.10: ಮಾನವನ ಜೀವನಕ್ಕೆ ಪ್ರಕೃತಿಯು ಸಹಜವಾಗಿಯೇ ಎಲ್ಲವನ್ನು ಒದಗಿಸುತ್ತಾ ಬಂದಿದೆ ಆದರೆ ಮಾನವನು ಪ್ರಕೃತಿಗೆ ದಕ್ಕೆ ತರುವಂತಹ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾನೆ ಸಹಜ ಪ್ರಕ್ರೀಯೇಯ ಮೂಲಕವೇ ಪ್ರಕೃತಿಯು ಮುನಿಸಿಕೊಳ್ಳುವ ಕಾರ್ಯ ಮಾಡುತ್ತದೆ ಅಂತಹ ಸಂದರ್ಬದಲ್ಲಿ ಶರಣರು ಸತ್ಪುರುಷರು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನ ಕೈಗೊಳ್ಳುತ್ತಾ ಸಾಗಿದ್ದಾರೆಂದು ಹುಬ್ಬಳ್ಳಿಯ ಮೂರು ಸಾವಿರದ ಮಠದ ಜಗದ್ಗುರು ಶ್ರೀ ರಾಜಯೋಗ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಇಂಗಳಗೇರಿ ಗ್ರಾಮದ ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯನಿ ಶರಣೆ ಶ್ರೀ ಅಕ್ಕಮಹಾದೇವಿ ಅಮ್ಮನವರು ಇಲಕಲ್ಲ ತಾಲೂಕಿನ ಗೊರಬಾಳ ಗ್ರಾಮದ ಸಾಧೂರ ತೋಟದಲ್ಲಿ 31 ದಿನಗಳ ಕಾಲ ಕೈಕೊಂಡ ಮೌನಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಸಮಾರಂಭವನ್ನು ದೀಪಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯನಿ ಶರಣೆ ಶ್ರೀ ಅಕ್ಕಮಹಾದೇವಿ ಅಮ್ಮನವರು 22 ವರ್ಷಗಳಿಂದ ನಿರಂತರ ಮೌನಾನುಷ್ಠಾನ ಕೈಗೊಳ್ಳುತ್ತಾ ಬಂದಿದ್ದಾರೆ ಅವರು ಕೈಗೊಳ್ಳುವ ಮೌನಾನುಷ್ಠಾನಗಳು ಭಕ್ತಾಧಿಗಳ ಒಳಿತಿಗಾಗಿ ಆಗಿವೆ ಲೋಕ ಕಲ್ಯಾರ್ಣಾವಾಗಿ ಈ ವರ್ಷ 31 ದಿನಗಳ ಕಾಲ ಮೌನ ವೃತಕೈಗೊಂಡು ಭಕ್ತರ ಬೇಡಿಕೆ ಮತ್ತು ರೈತಾಪಿ ಜನರ ಸಂಕಷ್ಟ ಜೀವನ ಒಳಗೊಂಡು ದೇಶದಲ್ಲಿ ಶಾಂತಿ ನೆಲೆಸಲಿ ಸಮೃದ್ದ ರಾಷ್ಟ್ರವಾಗಿ ಬೆಳೆಯಲಿ ಎಂಬ ಸಂದೇಶವನ್ನು ಪರಮಾತ್ಮನಿಗೆ ಸಲ್ಲಿಸಿದ್ದಾರೆಂದರು. ಪ್ರಕೃತಿಯು ನಮಗೆ ಎಲ್ಲವನ್ನು ಕೊಟ್ಟಿದೆ ಆದರೆ ನಾವು ಪ್ರಕೃತಿಗೆ ಏನನ್ನು ಕೊಟ್ಟಿಲ್ಲಾ ಪ್ರಕೃತಿ ವಿರೂದ್ದವಾಗಿ ನಡೆದುಕೊಳ್ಳುತ್ತಾ ಬಂದಿದ್ದೇವೆ ಹಾಗೆ ಆಗಬಾರದು ನಮ್ಮ ಕೈಲಾದಷ್ಟು ಪ್ರಕೃತಿಯನ್ನು ಕಾಪಾಡುವ ಕಡೆಗೆ ನಮ್ಮ ಹೆಜ್ಜೆ ಇರಬೇಕೆಂದು ಹೇಳಿದ ಜಗದ್ಗುರುಗಳು ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ತಪಸ್ಸಿನ ಶಕ್ತಿ ಈ ನಾಡಿನ ಭಕ್ತರ ಮೇಲೆ ಇರುವದರಿಂದ ಎಲ್ಲವೂ ಸರಿಯಾಗಿ ತೊಟ್ಟಿಲದಲ್ಲಿ ತೂಗೂತಿದೆ ಅಂತಹ ಮಹಾತ್ಮರನ್ನು ನಿತ್ಯ ನೆನೆಯುವದರೊಂದಿಗೆ ಭಕ್ತರು ತಮ್ಮ ಇಷ್ಠಾರ್ಥಗಳನ್ನು ಇಡೇರಿಸಿಕೊಳ್ಳಬೇಕೆಂದರು.
ಇನ್ನೋರ್ವ ಮಾತೋಶ್ರೀ ಯೋಗಿಶ್ವರಿ ಅಮ್ಮನವರು ಮಾತನಾಡಿ ಶಿವಯೋಗಿನಿ ಅಕ್ಕಮಹಾದೇವಿ ತಾಯಿಯವರು ಇಂಗಳಗೇರಿ ಶ್ರೀ ಖಾಸ್ಗತಮಠದಿಂದ ಇಲಕಲ್ಲದ ಗೊರಬಾಳ ಗ್ರಾಮದವರೆಗೆ ಬಂದು ಮೌನಾನುಷ್ಠಾನ ಕೈಗೊಂಡಿರುವದು ಈ ಗ್ರಾಮವು ಮಹಾತ್ಮರ ನೆಲವೆಂಬುದು ಎದ್ದು ಕಾಣುತ್ತಿದೆ ಅವರು ಈ ನೆಲದಲ್ಲಿ ಕೈಗೊಂಡ ಮೌನಾನುಷ್ಠಾನದಿಂದ ಈ ಭಾಗದ ಭಕ್ತರ ಭಾಗ್ಯದ ಬಾಗಿಲು ತೆಗೆದಂತಾಗಿದೆ ಈ ಮೌನಾನುಷ್ಠಾನದಿಂದ ಈ ಭಾಗದ ರೈತರಿಗೆ ನಾಗರಿಕರಿಗೆ ಹಾಗೂ ಭವಿಷ್ಯದ ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿದೆ ಆದರೂ ತೋಟ ಎನ್ನುವ ತಪೆÇೀವನದಲ್ಲಿ 31 ದಿನಗಳ ಕಾಲ ಕೈಗೊಂಡ ತಪ್ಪಸ್ಸು ಪರಮಾತ್ಮನಿಗೆ ಸಲ್ಲಲ್ಲಿದೆ ಭಕ್ತರ ಬೇಡಿಕೆ ಇಡೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು, ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಬುಡರಕಟ್ಟಿ. ರಮೇಶ ಸ್ವಾಮಿಗಳು, ಯೋಗ ಮತ್ತು ಜ್ಞಾನಾಶ್ರಮ ಗೋವಿನಹಳ್ಳಿಯ ಶ್ರೀ ಶಿವಭದ್ರಾ ಶಿವಾಚಾರ್ಯರು, ಸಿಂದಗಿ ಶ್ರೀಬೃಂಗಿಮಠದ ಶ್ರೀಗಳು, ಇಂಗಳೇಶ್ವರ ಶ್ರೀಗಳು, ನಂದಿಹಾಳದ ಶ್ರೀಗಳು, ತಿಂಥಣಿ ಮೌನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮಣ್ಣ ಬಡಿಗೇರ, ಹಾಗೂ ಇಂಗಳಗೇರಿ ಗ್ರಾಮದ ಮತ್ತು ಗೊರಬಾಳ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.