ಸುಳ್ಳು ಸಾಕ್ಷಿ ಸೃಷ್ಟಿಸಿ ಬಂಧನ ಖಂಡನೆ
ಕಾಳಗಿ :ಸೆ.10: ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಜಿ. ಯಳಸಂಗಿ ಮತ್ತು ಜಿಲ್ಲಾ ಅಧ್ಯಕ್ಷ ಮಂಜುನಾಥ ಭಂಡಾರಿ ಅವರ ಮೇಲೆ ಸುಳ್ಳು ಸಾಕ್ಷಿ ಸೃಷ್ಟಿಸಿ ದಲಿತ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು. ಅವರ ಮೇಲೆ ಇರುವ ಆರೋಪವನ್ನು ತೆಗೆದು ಹಾಕಿ ಪ್ರಕರಣವನ್ನು ಕೈ ಬಿಡಬೇಕು ಎಂದು ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕಾಳಗಿ ತಾಲೂಕು ದಲಿತ ಸೇನೆಯ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆಯ ಅಧ್ಯಕ್ಷ ನಾಗರಾಜ ಬೇವಿನಕರ, ಜಿಲ್ಲಾ ಸಂ. ಕಾರ್ಯದರ್ಶಿ ಖತಲಪ್ಪ ಅಂಕನ, ರಮೇಶ ಕುಡ್ದಳ್ಳಿ, ಮಲ್ಲು ಮಡಕಿ, ಖಾಲಿದ ಪಟೇಲ, ಮಾರುತಿ ತೆಗಲತಿಪ್ಪಿ, ಕೃಷ್ಣ ತೆಂಗಳಿ, ಹನುಮಂತ ಸಾಲಹಳ್ಳಿ ಸೇರಿದಂತೆ ಅನೇಕ ದಲಿತ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.