ನಾಳೆ ವಿಮೋಚನಾ ಚಳವಳಿಯ ನೆನಪು ಕಾರ್ಯಕ್ರಮ
ಕಲಬುರಗಿ:ಸೆ.10: ಕಿರಣ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘ ಮತ್ತು ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಸೆ.11ರಂದು ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ವಿಮೋಚನಾ ಚಳುವಳಿಯ ನೆನಪು ಎಂಬ ವಿನೂತನ ಕಾರ್ಯsಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10-30 ಗಂಟೆಗೆ ಸರ್ವಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರ್ವಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಪೆÇ್ರ. ಚನ್ನಾರೆಡ್ಡಿ ಪಾಟೀಲ್ ವಹಿಸಲಿದ್ದಾರೆ.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ, ಕೆಕೆಸಿಸಿಐ ಮಾಜಿ ಅಧ್ಯಕ್ಷರಾದ ಉಮಾಕಾಂತ ನಿಗ್ಗುಡಗಿ ಭಾಗವಹಿಸುವರು ಎಂದು ಉಭಯ ಸಂಸ್ಥೆಯ ಸಂಯೋಜಕರಾದ ಸುರೇಶ ಬಡಿಗೇರ ಹಾಗೂ ಮಂಜುನಾಥ ನಾಲವಾರಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್. ಪಿ. ಸುಳ್ಳದ್, ಚಂದ್ರೀಕಾ ಪರಮೇಶ್ವರ, ಮಲ್ಲಣ್ಣ ಮಡಿವಾಳ, ಉದಯ ಪಾಟೀಲ್, ಡಾ. ವಿಕ್ರಮ ಸಿದ್ದಾರೆಡ್ಡಿ, ಡಾ. ಸಲ್ಮಾನ್ ಪಟೇಲ್, ಡಾ. ಫಾರೂಕ್ ಮನ್ನೂರ, ಡಾ. ಸೈಯದ್ ಆತೀಫ್ ಹಾಸ್ಮಿ, ಶಿವಕಾಂತ ಮಹಾಜನ್ ಅವರನ್ನು ಸತ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.