ಅದ್ದೂರಿ ಪುರಾಣ ಮಂಗಲೋತ್ಸವ
ಕಲಬುರಗಿ: ಸೆ.10:ಶ್ರಾವಣ ನಿಮಿತ್ತ ಭವಾನಿ ನಗರದ ಶ್ರೀಗುರು ಚನ್ನವೀರೇಶ್ವರ ಮಠದಲ್ಲಿ ತಿಂಗಳ ನಡೆದ ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಪುರಾಣ ಮಹಾಮಂಗಲೋತ್ಸವ ಸೋಮವಾರ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ಅದ್ದೂರಿ ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಮಠದ ಪೀಠಾಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರಾ ಬಿಲ್ವಾರ್ಚನೆ, ಮಹಾ ಮಂಗಳಾರುತಿ ನಂತರ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು.
ನಂತರ ನಡೆದ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಜನರಲ್ಲಿ ನಮ್ಮ ಧಾರ್ಮಿಕತೆ, ಸಂಸ್ಕøತಿಯನ್ನು ಬಿತ್ತುವಂತಹ ಕಾರ್ಯ ಮಠಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ ಮಾತನಾಡಿ, ಲಿಂ. ಶ್ರೀ ಚನ್ನವೀರ ಶಿವಯೋಗಿಗಳು ಮನುಕುಲ ಉದ್ಧಾರಕರಾಗಿದ್ದಾರೆ. ತಮ್ಮ ಬಳಿಬಂದಂತಹ ಜನರ ಕಷ್ಟವನ್ನು ಬಗೆಹರಿಸಿದ ಮಹಾಮಹಿಮರಾಗಿದ್ದಾರೆ ಎಂದರು.
ಚನ್ನವೀರ ನಗರದಿಂದ ಆಗಮಿಸಿದ ಪಲ್ಲಕ್ಕಿಯಲ್ಲಿ ಶ್ರೀ ಲಿಂ. ಗುರು ಚನ್ನವೀರ ಶಿವಯೋಗಿಗಳ ಭಾವಚಿತ್ರ ಇಟ್ಟ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀಮಠದಿಂದ ಪ್ರಾರಂಭವಾಗಿ ರಾಮನಗರ ಕ್ರಾಸ್, ಭವಾನಿನಗರ, ಪೂಜಾರಿ ಮಠದ ವೃತ್ತ, ಕಾಕಡೆ ಚೌಕ್ ಮಾರ್ಗವಾಗಿ ಸಂಜೆ ವೇಳೆಗೆ ಮಠಕ್ಕೆ ತಲುಪಿತು. ನಂತರ ಪೂಜಾ ಕೈಂಕರ್ಯ, ಮಹಾಮಂಗಳಾರುತಿ ಮಾಡಿ, ಮಂಗಲೋತ್ಸವ ಸಂಪನ್ನವಾಯಿತು.
ಪುರಾಣದಲ್ಲಿ ಸೇವೆ ಸಲ್ಲಿಸಿದ ಭಕ್ತರಿಗೆ ಹಾಗೂ ಪುರಾಣಿಕರಾದ ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿ, ಗವಾಯಿ ಯಶ್ವಂತ ಬಡಿಗÉೀರ, ತಬಲಾವಾದಕ ರಾಜಶೇಖರ ಕಟ್ಟಿಸಂಗಾವಿ ಸೇರಿ ಮಠದಲ್ಲಿ ಒಂದು ತಿಂಗಳ ಪರ್ಯಂತ ಸೇವೆ ಸಲ್ಲಿಸಿದ ಭಕ್ತರನ್ನು ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸನ್ಮಾನಿಸಿದರು. ನಂತರ ಭಕ್ತರಿಂದ ಶ್ರೀಗಳ ತುಲಾಭಾರ ನೆರವೇರಿತು.
ಜಂಗಮ ವಟುಗಳಿಗೆ ಅಯ್ಯಾಚಾರ
ಶ್ರಾವಣ ಮಾಸದ ನಿಮಿತ್ತ ಶ್ರೀಗುರು ಚನ್ನವೀರೇಶ್ವರ ಮಠದಲ್ಲಿ ಭಾನುವಾರ ಜಂಗಮ ವಟುಗಳಿಗೆ ಸಾಮೂಹಿಕ ಆಯ್ಯಾಚಾರ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಿತು. ಅಂಬೆಜೋಗಾಯಿ ಶ್ರೀ ಶಂಭುಲಿಂಗ ಶಿವಾಚಾರ್ಯರು ಹಾಗೂ ಪಾಳಾದ ಗುರುಮೂರ್ತಿ ಶಿವಾಚಾರ್ಯರು ವಟುಗಳಿಗೆ ಉಪದೇಶ ನೀಡಿದರು. ಶ್ರೀ ಗುರುಪಾದಲಿಂಗ ಶಿವಯೋಗಿಗಳು ನೇತೃತ್ವ ವಹಿಸಿದ್ದರು. ಶ್ರೀ ಗುರು ಚನ್ನವೀರೇಶ್ವರ ವೇದ ಜ್ಯೋತಿಷ್ಯ ಪಾಠಶಾಲೆ ವತಿಯಿಂದ ವೈದಿಕ ಕಾರ್ಯಕ್ರಮ ನಡೆಯಿತು.