ಮೈಲೂರು ಶಾಲೆ ನೂತನ ಕಟ್ಟಡ ನಿರ್ಮಿಸುವಂತೆ ಗೋರನಾಳಕರ್ ಕರೆ
ಬೀದರ್:ಸೆ.10: ಶಿಥಿಲಾವಸ್ಥೆಗೆ ತಲುಪಿರುವ ಮೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸುವಂತೆ ಅಲ್ಲಿಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಸದಸ್ಯರಾದ ಮಹೇಶ ಗೋರನಾಳಕರ್ ಕರೆ ನೀಡಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಎಂದು ಬೀಳುತ್ತದೊ ಗೊತ್ತಿಲ್ಲ. ಈಗಾಗಲೇ ಸ್ಥಳಿಯ ಶಾಸಕರು ಹಾಗೂ ಹಾಲಿ ರಾಜ್ಯದ ಪೌರಾಡಳಿತ ಸಚಿವ ರಹಿಮ್ ಖಾನ್ ಭೇಟಿ ನೀಡಿದ್ದು ನೂತನ ಕಟ್ಟಡ ನಿರ್ಮಾಣ ಮಡುವ ಭರವಸೆ ನೀಡಿದ್ದಾರೆ. ಅದರೆ ಅದು ಯಾವಾಗ ಸಾಕರವಾಗಲಿದೆ ಗೊತ್ತಿಲ್ಲ. ಕೂಡಲೇ ಅದನ್ನು ಡೆಮಾಲಿಸ್ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಶಾಲೆ ನಡೆಯುವ ಸಂದರ್ಭದಲ್ಲಿ ಅದು ಬಿದ್ದರೆ ಅಲ್ಲಿ ಕಲಿಯುವ ಬಡ ಕಾರ್ಮಿಕರ ಹಾಗೂ ಬಾಲ ಮಂದಿರದ ನಿರ್ಗತಿಕ ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಲಿದೆ. ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಭೇಟಿ ನೀಡಿ ಸದ್ಯ ಖಾಸಗಿಯಾಗಿ ಒಂದು ಸ್ಥಳ ಪಡೆದು ಅಲ್ಲಿ ಶಾಲೆ ಶಿಫ್ಟ್ ಮಾಡಬೇಕೆಂದು ಆಗ್ರಹಿಸಿದರು.
ಕಳೆದ ಎರಡು ದಶಕಗಳಿಂದ ಈ ಶಾಲೆ ತರಗತಿ ಸಮಯ ಬೆಳಿಗ್ಗೆ 7.30 ಗಂಟೆಯಿಂದ 12.30 ಗಂಟೆ ವರೆಗೆ ಮಾತ್ರ ನಡೆಯುತ್ತಿತ್ತು. ದಿನವಿಡಿ ಶಿಕ್ಷಕರು ಹಾಗೂ ವಿಶೇಷವಾಗಿ ಅಲ್ಲಿಯ ಮುಖ್ಯ ಗುರುಗಳು ತಮ್ಮ ಖಾಸಗಿ ಕೆಲಸಕ್ಕೆ ಅನುಕುಲ ಆಗಲೆಂದು ಈ ರೀತಿ ಸಮಯ ನಿಗದಿ ಮಾಡಿದ್ದರು. ತಾನು ಎಸ್.ಡಿ.ಎಮ್.ಸಿ ಅಧ್ಯಕ್ಷನಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿ ಮನವಿÀ ಮೆರೆಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ನಿರ್ದೇಶನದಂತೆ ಅದನ್ನು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ನಿಗದಿಗೊಳಿಸಲಾಯಿತು. ಇದರಿಂದ ಮಸ್ತ್ ಮಜಾ ಮಾಡುತ್ತಿದ್ದ ಅಲ್ಲಿಯ ಹೆಚ್.ಎಮ್ ಹಾಗೂ ಇತರೆ ಸೋಮಾರಿ ಶಿಕ್ಷಕರಿಗೆ ಒಳ್ಳೆಯ ಪಾಠ ಆಯಿತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ತನಗೆ ಯಾವುದೇ ಮಾಹಿತಿ ನೀಡದೇ ನನ್ನ ಸ್ಥಾನದಲ್ಲಿ ಬೇರೆಯವರಿಗೆ ಎಸ್.ಡಿ.ಎಮ್.ಸಿ ಅಧ್ಯಕ್ಷರನ್ನಾಗಿ ಮಾಡಿರುವುದಲ್ಲದೇ ನನ್ನ ಮಗನ ಪ್ರವೇಶ ರದ್ದು ಮಾಡಿದ್ದಾರೆ. ಈಗಾಗಲೇ ನನ್ನ ಮಗು ಇದೇ ಶಾಲೆಯಲ್ಲಿ ಪ್ರವೇಶವಿದ್ದರೂ ತಂತ್ರಾಂಶದ ನೆಪವೊಡ್ಡಿ ಸರ್ಕಾರದ ನಿಯಮ ಗಾಳಿಗೆ ತೂರಿ ನವೋದಯ ಪರಿಕ್ಷೆ ಬರೆಯುವ ನನ್ನ ಮಗನ ಅವಕಾಶ ತಪ್ಪಿಸಲು ಅಲ್ಲಿಯ ಮುಖ್ಯ ಗುರು ರಮೇಶ ಹೊರಟಿದ್ದಾರೆ ಎಂದು ಹರಿಹಾಯ್ದರು.
ಮಕ್ಕಳಿಗೆ ರಾಣಿ ಕಿತ್ತೂರು ಚನ್ನಮ್ಮ, ಸೈನಿಕ ಶಾಲೆಗಾಗಿ ಹಾಗೂ ನವೋದಯಗಳಂತಹ ಸ್ಪರ್ಧಾತ್ಮಕ ಪರಿಕ್ಷೆಗೆ ಮಕ್ಕಳಿಗೆ ಉತ್ತೇಜನ ನೀಡುವ ಬದಲು ಇದರಿಂದ ವಂಚಿಸುವ ಕಾರ್ಯದಲ್ಲಿ ಅಲ್ಲಿಯ ಮುಖ್ಯ ಗುರು ನಿರತರಾಗಿದ್ದಾರೆ. ಈ ತಿಂಗಳ 14ರೊಳಗೆ ನನ್ನ ಮಗ ಅನಿರೂದ್ಧನಿಗೆ ನವೋದಯ ಪರಿಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಸಂಬಂಧಪಟ್ಟ ಫಾರಮ್ ಮೇಲೆ ಮುಖ್ಯ ಗುರು ಸಹಿ ಮಾಡಬೇಕು ಆದರೆ ಸಹಿ ಮಾಡಲು ನಿರಾಕರಿಸುತ್ತಿದ್ದಾರೆ. ಈ ವಿಚಾರವಾಗಿ ಕೂಡಲೇ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು. ಈ ತಿಂಗಳ 17ರಂದು ಕಲಬುರಗಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳಿಗೂ ಮುಖ್ಯ ಗುರು ರಮೇಶ ಅವರ ವಿರೂದ್ಧ ದೂರು ಸಲ್ಲಿಸಲಾಗುವುದು. ನನ್ನ ಮಗನಿಗೆ ನವೋದಯ ಪರಿಕ್ಷೆ ಬರೆಯಲು ತಪ್ಪಿಸಲು ಹೊರಟÀ ಹೆಚ್.ಎಮ್ ರಮೇಶ ಅವರನ್ನು ಸರ್ಕಾರ ಕೂಡಲೇ ವಜಾ ಮಾಡಬೇಕೆಂದು ಗೋರನಾಳಕರ್ ಒತ್ತಾಯಿಸಿದರು.
ನಾವದಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಸಂಗಮೇಶ ಏಣಕೂರ್, ಕರ್ನಾಟಕ ರಾಜ್ಯ ಭೂವಿ ವಡ್ಡರ್ ವೇದಿಕೆ ರಾಜ್ಯಾಧ್ಯಕ್ಷ ಸಂತೋಷ ಏಣಕೂರ್, ದಲಿತ ಯುನಿಟಿ ಮುಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.