ಆಪಾದಿತನಿಗೆ 2 ವರ್ಷ ಶಿಕ್ಷೆ, 10 ಸಾವಿರ ರೂ.ದಂಡ
ಯಾದಗಿರಿ : ಸೆ.10: ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರು ಠಾಣೆ ಗುನ್ನೆ ನಂ.03/2013 ಸ್ಪಶಲ್ ಕೇಸ್ ನಂ.13/2013 ನೇದ್ದರಲ್ಲಿ ಆಪಾದಿತನಾದ ಪೇಮಕುಮಾರ ತಂದೆ ರಾಜಪ್ಪ ಪಡೆನೋರ, ಗ್ರಾಮ ಲೆಕ್ಕಧಿಕಾರಿ ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದ ಗ್ರಾಮ ಲೆಕ್ಕಧಿಕಾರಿ ಈ ಟ್ರಾಪ್ ಪ್ರಕರಣದಲ್ಲಿ ದೂರದಾರರಾದ ಶ್ರೀ ಹಣಮಂತ ತಂದೆ ಸಂಜೀವಪ್ಪ ದೇಸಾಯಿ ಸಾ.ಕರ್ನಾಳ ತಾ.ಸುರಪುರ ಇವರು ಕರ್ನಾಳ ಗ್ರಾಮ ಸರ್ವೇ ನಂಬರ್ 259 ವಿಸ್ತರಣೆ 03 ಎಕರೆ 02 ಗುಂಟೆ, ಕರ್ನಾಳ ಗ್ರಾಮದ ಫಿರ್ಯಾದಿಯ ತಂದೆಯಾದ ಸಂಜೀವಪ್ಪ ದೇಸಾಯಿ ಇವರ ಹೆಸರಲ್ಲಿ ಇದ್ದು, ಸದಿರ ಫಿರ್ಯಾದಿ ತಂದೆ ಸಂಜೀವಪ್ಪ ದೇಸಾಯಿ ಮೃತನಾಗಿರುದ್ದರಿಂದ ಇದನ್ನು ತನ್ನ ತಾಯಿಯವರಾದ ಗುಂಡಮ್ಮನ (ಚಾಸಾ ಸಂ.10) ಹೆಸರಿಗೆ ಮುಟೇಶನ ಮಾಡಿಸಿಕೊಳ್ಳಲು 35 ರೂ.ಗಳ ಪೀಜು ಕಟ್ಟಿ ಅರ್ಜಿ ಕೊಟ್ಟಿದ್ದು ಇರುತ್ತದೆ. ಈ ಕೆಲಸ ಮಾಡಿಕೊಡಲು ಆರೋಪಿತ ಪ್ರೇಮಕುಮಾರ ಅವರ 2000 ರೂ.ಗಳ ಬೇಡಿಕೆ ಇಟ್ಟುರತ್ತಾರೆ ದಿನಾಂಕ 28-02-2013 ರಂದು 2000 ರೂ.ಗಳ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೆÇಲೀಸ್‍ರಿಗೆ ಸಿಕ್ಕಿಬಿದ್ದಿರುತ್ತಾರೆ, ಈ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮಾನ್ಯ ವಿಶೇಷ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್ ರೇಖಾ ಅವರ ದಿನಾಂಕ 20-08-2024 ರಂದು ಆಪಾಧಿತನಿಗೆ 2 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ಆದೇಶ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಯಾದಗಿರಿ ಪರವಾಗಿ ವಿಶೇಷ ಸರಕಾರಿ ಅಭೀಯೋಜಕರಾದ ಶ್ರೀ ಪಿ.ಶಿವರಾಜ ಉಳ್ಳೆಸುಗೂರ ಅವರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.