ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ:ನಮಾಜಕಟ್ಟಿ
ತಾಳಿಕೋಟೆ:ಸೆ.10: ಖೇಲೋಗೇ ಕುದ್ದೋಗೇ ಬನೇಗಾ ಕರಾಬ್, ಪಡೋಗೇ ಲಿಕೋಗೇ ಬನೇಗೆ ನವಾಬ್, ಖೇಲೋಗೇ ಕುದ್ದೋಗೆ ಬನೇಗೆ ಕಾಮಿಯಾಬ್ ಎಂಬ ಹಿಂದಿನ ಹಾಗೂ ಇಂದಿನ ವಿದ್ಯಾರ್ಥಿ ಜೀವನದಲ್ಲಿ ನಡೆಯುತ್ತಿರುವ ಹಾಗೂ ಈ ಹಿಂದೆ ಮಾತನಾಡುತ್ತಿರುವ ವಿಷಯವನ್ನು ಕ್ರೀಡಾಪಟುಗಳಿಗೆ ತಿಳಿ ಹೇಳಿ ಅರ್ಥೈಸಿದ ರಿಲಾಯಿನ್ಸ್ ಏಜ್ಯೂಕೇಶನ್ ಸೋಸಾಯಿಟಿಯ ಅಧ್ಯಕ್ಷ ಅಬ್ದುಲ್‍ರಹೇಮಾನ ನಮಾಜಕಟ್ಟಿ ಅವರು ಹೇಳಿದರು.
ಸೋಮವಾರರಂದು ರಿಲಾಯಿನ್ಸ್ ಉರ್ದು ಪ್ರೌಢ ಶಾಲೆ ತಾಳಿಕೋಟೆ, ಹಾಗೂ ಪೂರ್ವ ವಲಯಮಟ್ಟದ ಕ್ರೀಡಾಕೂಟ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ರಿಲಾಯನ್ಸ್ ಏಜ್ಯೂಕೇಶನ್ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ದ್ವಜಾರೋಹಣವನ್ನು ನೇರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಹಿಂದಿನ ಕಾಲದಲ್ಲಿ ಆಟ ಆಡುವಾಗ ಹಿರಿಯರು ಜಿಗಿದಾಟ ಮಾಡುವಾಗ ಬಿದ್ದೀರಿ ಎಚ್ಚರದಿಂದ ಇರಿ ಎಂಬ ಮಾತನ್ನು ಹೇಳುತ್ತಿದ್ದರಲ್ಲದೇ ಕೇವಲ ಓದಿರಿ, ಬರಿಯಿರಿ, ಇದರಿಂದ ನೀವು ನವಾಬನ ಸ್ಥಾನಮಾನ ಹೊಂದುವಿರಿ ಎಂದು ಹೇಳುತ್ತಿದ್ದರು ಆದರೆ ಇಂದಿನ ದಿನಮಾನದಲ್ಲಿ ಆಟವಾಡಿರಿ ಜಿಗಿಯಿರಿ ನೀವು ವಿಜಯ ಶಾಲಿಯಾಗಿರಿ ಎಂಬ ಮಾತು ಹೊರಬರುತ್ತದೆ ಎಂಬುದನ್ನು ಅರ್ಥೈಸಿ ಹೇಳಿದ ಅವರು ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಕಾರಣ ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ ಬಾಳಿ ಬೆಳಗುವಂತವರಾಗಿರಿ ಎಂದು ಹೇಳಿದ ಅವರು ಮಾತಾಪಿತರನ್ನು ಗೌರವಿಸಿರಿ ಶಿಕ್ಷಕರನ್ನು ಹಾಗೂ ಸಂಬಂದಿತ ಸಂಸ್ಥೆಯಾಗಲಿ ಶಿಕ್ಷಣಕ್ಕೆ ಸಂಬಂದಿತ ಅಧಿಕಾರಿ ವರ್ಗದವರನ್ನಾಗಲಿ ಗೌರವಿಸುವಂತಹ ಕಾರ್ಯ ಮಾಡಿರಿ ನಿಮ್ಮ ಏಳಿಗೆಯನ್ನು ನೀವೇ ರೂಪಿಸಿಕೊಳ್ಳಬೇಕಾಗುತ್ತದೆ ಎಂದ ಅವರು ವಿದ್ಯೆಯೊಂದಿಗೆ ಕ್ರೀಡೆ ಎಂಬುದು ಇರಲಿ ಎಂದು ಒತ್ತಿ ಹೇಳಿದರು.
ಇನ್ನೋರ್ವ ಕ್ರೀಡಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಶಿಕ್ಷಕಣ ಸಂಯೋಜಕರಾದ ಸುರೇಶ ಹಿರೇಮಠ ಅವರು ಮಾತನಾಡಿ ಶಿಕ್ಷಣಿಕ ಪ್ರಗತಿಗಾಗಿಯೇ ಬಡಿದಾಡುವ ಸ್ಥಿತಿ ಮುಂದುವರೆದಿದೆ ಆದರೆ ಕ್ರೀಡಾಕೂಟಕ್ಕೆ ಮಹತ್ವ ನೀಡುತ್ತಿಲ್ಲಾ ಕ್ರೀಡೆ ಎನ್ನುವದರಿಂದ ಮನಸ್ಸು ಸದೃಢವಾಗಿರಲಿದೆ ಇದರಿಂದ ಶಿಕ್ಷಣಕ್ಕೆ ಮುಂದಾಗಲು ಸಾದ್ಯವಾಗಲಿದೆ ಕಾರಣ ಕ್ರೀಡೆ ಎಂಬುದು ಶೈಕ್ಷಣಿಕ ಅವಿಭಾಜ್ಯ ಅಂಗವಾಗಿದೆ ಕಾರಣ ವಿದ್ಯಾರ್ಥಿಗಳು ದೈಹಿಕವಾದ ಆಟಗಳಿಗೆ ಲಕ್ಷಕೊಡಿ ಮೋಬೈಲ್‍ಗಳಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇನ್ನೋರ್ವ ಕ್ರೀಡಾ ಜ್ಯೋತಿ ಸ್ವಿಕರಿಸಿದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಟಿ.ವಜ್ಜಲ ಅವರು ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಲು ದೈಹಿಕವಾಗಿ ಸದೃಢವಾಗಿರಬೇಕಾಗುತ್ತದೆ ಅಂತಹ ವ್ಯಕ್ತಿಯಲ್ಲಿ ಸದೃಢವಾದಂತಹ ಮನಸ್ಸು ಇರುತ್ತದೆ ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಗವಾಗಿರುತ್ತದೆ ಕಾರಣ ಆಟೋಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಇದರಿಂದ ವಿವಿಧ ಕ್ರೀಡೆಗಳಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದಲ್ಲಿಯೂ ಸಹ ಯಶ ಕಾಣಲು ಸಾದ್ಯವಾಗುತ್ತದೆ ಎಂದರು.
ಇನ್ನೋರ್ವ ತಾಲೂಕಾ ದೈಹಿಕ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷ ರಾವುತ್ ಪೂಜಾರಿ ಅವರು ಮಾತನಾಡಿ ಗೆಲವುದಕ್ಕಿಂತ ಭಾಗವಹಿಸುವದು ಮುಖ್ಯವಾಗಿದೆ ವಲಯ ಹಾಗೂ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತಾ ಪ್ರಮಾಣ ಪತ್ರ ಭರಣಾ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಹೇಳಿದರಲ್ಲದೇ ಇಂದಿನ ಕ್ರೀಡಾಕೂಟ ಬಹಳೇ ಯಶಸ್ವಿರೂಪದಲ್ಲಿ ನಡೆಯಲಿದೆ ಯಾಕೆಂದರೆ ಇದನ್ನು ಸಂಘಟಿಸಿದ ಸಂಘಟಿಕರು ಕ್ರೀಡಾ ಆಸಕ್ತಿಯನ್ನು ಹೊಂದಿದ್ದಾರೆಂದರು.
ಕಾರ್ಯಕ್ರಮಕ್ಕೆ ಮೊದಲು ಕ್ರೀಡಾ ವಿದ್ಯಾರ್ಥಿಗಳೊಂದಿಗೆ ಪಥಸಂಚಲನ ನಡೆಸಿದ ದೈಹಿಕ ಶಿಕ್ಷಕ ಸಿ.ಜಿ.ಗೌಡರ ಅವರು ನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ಸಂಪನ್ಮೂಲ ವ್ಯಕ್ತಿ ರಾಜು ವಿಜಾಪೂರ ಅವರು ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿ ನಿಸ್ಪಕ್ಷಪಾತತನದಿಂದ ಆಟವಾಡಬೇಕೆಂದು ಕಿವಿಮಾತೇಳಿದರು.
ಈ ಕ್ರೀಡಾಕೂಟದಲ್ಲಿ ಇಕ್ರಾ ಉರ್ದು ಪ್ರೌಢ ಶಾಲೆ, ರಿಲಾಯಿನ್ಸ್ ಉರ್ದು ಶಾಲೆ, ಅಂಜುಮನ್ ಉರ್ದು ಪ್ರೌಢ ಶಾಲೆ, ಬ್ರೀಲಿಯಂಟ್ ಆಂಗ್ಲಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಬಿ.ಸಾಲವಾಡಗಿ, ಸೀಕ್ರೇಡ್ ಆರ್ಟ ಪ್ರೌಢ ಶಾಲೆಗಳು ಭಾಗವಹಿಸಿದ್ದವು. ಈ ಕ್ರೀಡಾಕೂಟದಲ್ಲಿ ಒಟ್ಟು 250 ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ವ್ಹಾಲಿಬಾಲ್, ಕಬ್ಬಡ್ಡಿ, ಖೋ ಖೋ, ತ್ರೋಬಾಲ್, 100 ಮೀ, 200 ಮೀ, 400 ಮೀ, 800 ಮೀ, ಓಟ ಹಾಗೂ ಎತ್ತರ ಹಾಗೂ ಉದ್ದ ಜಿಗಿತ, ರಿಲೆ ಒಳಗೊಂಡು ಗುಂಪು ಹಾಗೂ ವಯಕ್ತಿಕ ಆಟಗಳು ಜರುಗಿದವು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ನಾಯ್ಕೋಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಬಿ.ಬಿರಗೊಂಡ, ರಾಮನಗೌಡ ಬಿರಾದಾರ, ಸಂಗಮೇಶ ಪಾಲ್ಕಿ, ಇಸಾಕ್ ನಮಾಜಕಟ್ಟಿ, ಜಲಾಲ ಸರ್, ವಿಶ್ವನಾಥ ಪಾಟೀಲ, ಬಾಲಾಜಿ ವಿಜಾಪೂರ, ಆಯ್.ಎಲ್.ಆಲಮೇಲ, ಶ್ರೀಶೈಲ ಘವಡೆ, ಎ.ಡಿ.ಗೋನಾಳ, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ರಮೇಶ ಕಟ್ಟಿಮನಿ ಸ್ವಾಗತಿಸಿದರು. ಸಿಆರ್‍ಪಿ ಎಂ.ಎ.ಯಕೀನ್ ನಿರೂಪಿಸಿದರು.