2025ರಲ್ಲಿ 7ನೇ ಭಾರತೀಯ ಸಂಸ್ಕøತಿ ಉತ್ಸವ: 30 ಲಕ್ಷ ಜನರು ಭಾಗಿ: ಪೂಜ್ಯ ಸದಾಶಿವ ಸ್ವಾಮಿಜಿ
ಬೀದರ್: ಸೆ.10:2025ರ ಜನೆವರಿ 29ರಿಂದ ಫೆಬ್ರವರಿ 6ನೇ ತಾರಿಖಿನ ವರೆಗೆ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 300 ಎಕರೆ ವಿಶಾಲ ಪ್ರದೇಶದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿ ವತಿಯಿಂದ 7ನೇ ಭಾರತೀಯ ಸಂಸ್ಕøತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಸುಮಾರು 30 ಲಕ್ಷ ಜನ ಭಾಗವಹಿಸುವ ನಿರಿಕ್ಷೆ ಇದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿಗಳು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷರಾಗಿರುವ ಪೂಜ್ಯ ಸದಾಶಿವ ಸ್ವಾಮಿಗಳು ತಿಳಿಸಿದರು.
ಸೋಮವಾರ ನಗರದ ಬಸವೇಶ್ವರ ಸರ್ಕಲ್‍ನಲ್ಲಿ ಭಾರತ ವಿಕಾಸ ಸಂಗಮ ವಿಕಾಸ ಅಕಾಡೆಮಿ ಬೀದರ್ ಜಿಲ್ಲೆ ವತಿಯಿಂದ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆಯ ನೇತೃತ್ವ ವಹಿಸಿ ಸ್ವಾಗತ ಸ್ವೀಕರಿಸಿ ಮಾತನಾಡಿರುವ ಅವರು, ಈ ಒಂಬತ್ತು ದಿನದ ಕಾರ್ಯಕ್ರಮಕ್ಕೆ 22 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದ ನಿಮಿತ್ಯ ಈಗಾಗಲೇ 7 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ವಿಕಾಶ ಪಥ ಯಾತ್ರೆ ಸಂಚರಿಸಿದೆ. 21 ವರ್ಷಗಳಿಂದ ವಿಕಾಸ ಅಕಾಡೆಮಿ ಶಿಕ್ಷಣ, ಆರೋಗ್ಯ, ಕೃಷಿ, ಸಾಮಾಜಿಕ ಹೀಗೆ ಏಳು ಕ್ಷೇತ್ರಗಲಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ 6 ಭಾರತೀಯ ಸಂಸ್ಕøತಿ ಉತ್ಸವ ಜರುಗಿದ್ದು, ಇದು 7ನೇ ಕಾರ್ಯಕ್ರಮವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಗವಹಿಸಲಿದ್ದು, ನಾಲ್ಕು ರಾಜ್ಯಗಳ ರಾಜ್ಯಪಾಲರು ಹಾಗೂ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವರು. ವಿಶೇಷವಾಗಿ ಸುತ್ತೂರು ಶ್ರೀಗಳು, ತರಳುಬಾಳು ಶ್ರೀಗಳು, ಕಾಡಸಿದ್ದೇಶ್ವರ ಸ್ವಾಮಿಗಳು, ಕೊಪ್ಪಳ ಗವಿಮಠದ ಪೂಜ್ಯರು, ಬೀದರ್ ಜಿಲ್ಲೆಯ ಡಾ.ಶಿವಕುಮಾರ ಶ್ರೀಗಳು, ಡಾ.ಚನ್ನವೀರ ಶಿವಾಚಾರ್ಯರು ಹಾರಕೂಡ, ಭಾಲ್ಕಿ ಪೂಜ್ಯರು ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ಕೃಷಿ ಕ್ಷೇತ್ರದಲ್ಲಿ ಅಪರ ಸಧನೆಗೈದ 254 ಸಾಧಕರಿಗೆ ಗೌರವ ಸನ್ಮಾನ, ನಗದು ಮತ್ತು ಪ್ರಶಸ್ತಿ ನೀಡಲಾಗುವುದು ಎಂದು ಪೂಜ್ಯರು ತಿಳಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತರು ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಷ್ಟಾನದ ಅಧ್ಯಕ್ಷರಾದ ಶಿವಶರಣಪ್ಪ ವಾಲಿ, ಬೀದರ್ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ ಶಟಕಾರ, ವಿದ್ಯಾ ಭಾರತಿ ಕರ್ನಾಟಕ ಜಿಲ್ಲಾಧ್ಯಕ್ಷ ಪ್ರೊ.ಎಸ್.ಬಿ ಸಜ್ಜನಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿ ಶಿವಶಂಕರ ಟೋಕರೆ, ವಿಕಾಸ ಅಕಾಡೆಮಿ ತಾಲೂಕು ಸಹ ಸಂಚಾಲಕ ಬಸವರಾಜ ಅಷ್ಟಗಿ, ನಗರ ಸಂಚಾಲಕ ಕಾಮಶೆಟ್ಟಿ ಚಿಕ್ಕಬಸೆ, ಖಾಸಗಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ವಣಗೇರಿ, ಶಾರೀರಿಕ ಶಿಕ್ಷಕ ರಾಮಜಿ ರಾಠೋಡ್, ಎ.ಬಿ.ವಿ.ಪಿ ಜಿಲ್ಲಾ ಸಂಚಾಲಕ ರೇವಣಸಿದ್ದ ಜಾಡರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದಕ್ಕೂ ಮುನ್ನ ಔರಾದ್ ಮೂಲಕ ಬಂದ ಕಲ್ಯಾಣ ಕರ್ನಾಟಕ ವಿಕಾಸ ಪಥಯಾತ್ರೆಗೆ ನಗರದ ಸಿದ್ದಾರ್ಥ ಕಾಲೇಜು ಬಳಿ ಸಕಲ ವಾದ್ಯ ಪರಿಕರಗಳೊಂದಿಗೆ ಗೌರವಯುತವಾಗಿ ಸ್ವಾಗತಿಸಲಾಯಿತು. ಆನಸೇವಾ ಶಾಲೆ, ಸಿದ್ದಾರ್ಥ ಕಾಲೇಜು, ಸರಸ್ವತಿ ಶಾಲೆ ಮಕ್ಕಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಪಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ಪಥಯಾತ್ರೆಯು ನಗರದ ಅಂಬೇಡ್ಕರ್ ವೃತ್ತ, ಭಗತಸಿಂಗ್ ಚೌಕ್, ಮಹಾವೀರ ಸರ್ಕಲ್, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಸಿದ್ದಾರುಢ ಮಠ ತಲುಪಿತು. ದಾರಿಯಲ್ಲಿ ಕಮಠಾಣೆ ಶಾಲೆ, ವಿದ್ಯಾಶ್ರೀ ಶಾಲೆ, ರವಿಂದ್ರ ಶಾಲೆ, ಬಿ.ವಿ.ಬಿ ಕಾಲೇಜು, ಬಸವೆಶ್ವರ ಬಿ.ಇಡಿ ಕಾಲೇಜು ವಿದ್ಯಾರ್ತಿ ಹಾಗೂ ಶಿಕ್ಷಕರು ಈ ಪಥಯಾತ್ರೆಗೆ ಭವ್ಯ ಸ್ವಾಗತ ಕೋರಿದರು.