ಅರಸೀಕೆರೆ ಹೋಬಳಿಯಾದ್ಯಂತ ಗಣೇಶನ ವಿಸರ್ಜನೆ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಸೆ.೧೦; ಅರಸೀಕೆರೆ ಹೋಬಳಿಯಾದ್ಯಂತ ಮೂರು ದಿನಗಳ ಕಾಲ ಗಣೇಶನ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ ಅರಸೀಕೆರೆಯ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನರು ಗಣೇಶನನ್ನು ಸೋಮವಾರ ಸಂಜೆ ವಿಸರ್ಜಿಸಲಾಯಿತು.ಮಕ್ಕಳು ಪಟಾಕಿ ಹಾರಿಸುತ್ತ, ಸುರ್ ಸುರ್ ಬತ್ತಿ ಹಚ್ಚುತ್ತಾ, ಗಣಪತಿ ಬಪ್ಪ ಮೋರಿಯ ಎಂದು ಕೂಗುತ್ತಾ ಕೆರೆ ಬರುವವರೆಗೂ ತುಂಬಾ ಸಂತೋಷದಿAದ ದಾರಿಯುದ್ದಕ್ಕೂ ಸಂಭ್ರಮದಿಂದ ನಡೆದು ಗಣಪ ಬಂದ ಚಿಕ್ಕ ಕೆರೇಲಿ ಬಿದ್ದ, ದೊಡ್ಡ ಕೆರೇಲಿ ಎದ್ದ ಎನ್ನುತ್ತಾ ಕೆರೆಯಲ್ಲಿ ವಿನಾಯಕನನ್ನು ಕಳಿಸಿದರು.ವಿವಿಧ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಯುವಕರು ನೃತ್ಯ ಮಾಡುತ್ತಾ, ಪಟಾಕಿ ಸಿಡಿಸುತ್ತಾ ಮೆರವಣಿಗೆ ಮುಖಾಂತರ ಕೆರೆಗೆ ಗಣೇಶನನ್ನು ವಿಸರ್ಜಿಸಲಾಯಿತು.ಈ ಸಂದರ್ಭದಲ್ಲಿ ಎನ್. ನೀಲಪ್ಪ,ಪ್ರಶಾಂತ್ ಪಾಟೀಲ್, ವೈಷ್ಣವಿ, ವೈಶಾಕ್, ವೈಭವ್, ಕೆ.ಮಹೇಶ್, ಎ.ಬಿ.ಜಗದೀಶ್ ಗೌಡ, ಎನ್.ನವೀನ್, ಎನ್. ಸುನಂದ, ಎ.ಬಿ.ವೀಣಾ, ಕೆ. ಎಂ. ಮನು, ಕೆ.ಎಂ.ಅನು, ದೀಕ್ಷಿತ್ ಗೌಡ, ಪರುಶುರಾಮ್, ಕೆಂಪಣ್ಣ, ರೇಣುಕಾ, ಚೇತನಾ, ಪವನ ಕುಮಾರಿ, ಹಾಗೂ ಬಸವರಾಜ್ ಇದ್ದರು.