ಪರಿಸರ ಉಳಿಕೆಗೆ ನಿರಂತರ ಹೋರಾಟ ಅಗತ್ಯ
ಧಾರವಾಡ,ಸೆ.10: ಹೋರಾಟದ ಸಾಗರಕೆ ಸಾವಿರಾರು ನದಿಗಳು ಎಂಬ ಕವಿ ಸಿದ್ಧಲಿಯಂಗಯ್ಯನವರ ಮಾತಿನಂತೆ ನಾವು ಪರಿಸರವನ್ನು ಉಳಿಸುವುದರ ಹೋರಾಟ ಮಾಡುತ್ತಲೇಇರೋಣ. ನಮ್ಮ ಹೋರಾಟದಿಂದ ಪರಿಸರ ಉಳಿಯಲಿ, ಪರಿಸರವನ್ನು ಮುಖ್ಯಉದ್ದೇಶವಾಗಿಟ್ಟುಕೊಂಡು ಕೆಲಸ ಮಾಡೋಣಎಂದು ಸಮಾವೇಶದ ಸಂಚಾಲಕ ಡಾ. ಸಂಜೀವಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಶಿವಮೊಗ್ಗ, ಪರಿಸರಕ್ಕಾಗಿ ನಾವು ಧಾರವಾಡಜಿಲ್ಲೆ ಸಂಯುಕ್ತಆಶ್ರಯದಲ್ಲಿ ಆಯೋಜಿಸಿದ್ದ ಸಹ್ಯಾದ್ರಿ-2024' ಚಿಪ್ಕೋ-50, ಅಪ್ಪಿಕೋ-40 ಒಂದು ಮೆಲುಕು ಹಾಗೂ ಅರಣ್ಯಗಳು ಮತ್ತು ಸುಸ್ಥಿತ ಅಭಿವೃದ್ಧಿ, ಎರಡು ದಿನಗಳ ಚಿಂತನ-ಮಂಥನಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತುಗಳನ್ನಾಡುತ್ತಿದ್ದರು. 2 ದಿನಗಳ ಈ ಚಿಂತನ-ಮಂಥನಕಾರ್ಯಕ್ರಮ ಯಶಸ್ವಿಯಾಗಿದ್ದು, ಗೋಷ್ಠಿಗಳು ಜ್ಞಾನದಖುಷಿಯನ್ನು ನೀಡಿದರೆ, ಶಿವಕುಮಾರ ಸ್ವಾಮಿಗಳ ಗೋಷ್ಠಿ ನಮಗೆ ಸಮಾಜದ ಬಲ ನೀಡಿತು.ಇಂತಹಕಾರ್ಯಕ್ರಮವನ್ನುಕರ್ನಾಟಕ ವಿದ್ಯಾವರ್ಧಕ ಸಂಘ ನಡೆಸಿದೆ ಎಂಬುದು ಹೆಮ್ಮೆಯ ವಿಷಯ. ಸಮಾಜದ ಪ್ರತಿಯೊಬ್ಬರೂ ಪರಿಸರ ಉಳಿಸುವ ಹೋರಾಟದಲ್ಲಿ ಭಾಗವಹಿಸಬೇಕು ಹಾಗೂ ಪಶ್ಚಿಮ ಘಟ್ಟಗಳನ್ನು ಉಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಪರಿಸರವನ್ನು ನೋಡಿದಾಗ ಆಗುವ ಸಂತೋಷಆಗಾಧವಾದದ್ದು.ಆ ಆನಂದ ಬೇರೆಯಾವುದರಲ್ಲೂ ಸಿಗುವುದಿಲ್ಲ. ಈ ಎರಡು ದಿನದ ಸಮಾವೇಶ ನನಗೆ ಒಂದುಯೋಚನೆ ಹುಟ್ಟುವಂತೆ ಮಾಡಿದೆ.ಇಂಥಅತ್ಯುತ್ತಮ ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿ ಆಗಬೇಕು. ಮಕ್ಕಳ ಮನಸ್ಸಿನಲ್ಲಿ ಪರಿಸರದಕುರಿತುಜಾಗೃತಿ ಮೂಡಿಸಿದರೆ ಸಮಾರೋಪದ ಪೂರ್ವದಲ್ಲಿಜರುಗಿದ ಮೊದಲ 3 ಗೋಷ್ಠಿಯಲ್ಲಿ ಹವಾಮಾನ ಸಂಕಷ್ಟದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಮಲೆನಾಡು' ಕುರಿತು ಸಾಯಿಮನೆಯ ಬಾಲಚಂದ್ರ ಹೆಗಡೆ ಮಾತನಾಡಿದರೆ, 4 ಗೋಷ್ಠಿಯಲ್ಲಿಸಮತೋಲಿತಅಭಿವೃದ್ಧಿ’ ಕುರಿತುಧಾರವಾಡದಡಾ.ಪ್ರಕಾಶ ಭಟ್ ಮಾತನಾಡಿದರು.
ಸರಸ್ವತಿ ಪೂಜಾರ ಸ್ವಾಗತಿಸಿ, ಪರಿಚಯಿಸಿದರು.ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಸಂಜೀವಕುಲಕರ್ಣಿ, ವೀರಣ್ಣಒಡ್ಡೀನ, ಗುರು ಹಿರೇಮಠ, ಡಾ.ಧನವಂತ ಹಾಜವಗೋಳ, ಡಾ. ಶಿವಾನಂದ ಶೆಟ್ಟರ, ಶಾರದಾ ಗೋಪಾಲ, ಕವಿತಾ ಎಲೆದಳ್ಳಿ, ಸರಸ್ವತಿ ಪೂಜಾರ, ಬಿ.ಎಂ.ಕುಮಾರಸ್ವಾಮಿ, ಬಾಲಚಂದ್ರ ಹೆಗಡೆ, ಡಾ.ಪ್ರಕಾಶ ಭಟ್, ಮನೋಜಕುಮಾರ, ನಿರ್ಮಲಾಗೌಡ, ಅಖಿಲೇಶ ಚಿಪ್ಪಳಿ, ಮಮತಾರಾಣಿ, ರತ್ನಾ, ಜಬಿವುಲ್ಲಾ, ಲಿನೆಟ್ ಡಿಸಿಲ್ವಾ ಸೇರಿದಂತೆ ಅನೇಕ ಪರಿಸರಕಾರ್ಯಕರ್ತರು ಭಾಗವಹಿಸಿಸದ್ದರು.