ಕಲ್ಯಾಣ ಕರ್ನಾಟಕ ವಿಕಾಸ ರಥಯಾತ್ರೆಗೆ ಭವ್ಯ ಸ್ವಾಗತ
ಔರಾದ್ :ಸೆ.10: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಬೀದರ ವತಿಯಿಂದ 7ನೇ ಭಾರತೀಯ ಸಂಸ್ಕøತಿ ಉತ್ಸವದ ಪ್ರಯುಕ್ತ ಕಲ್ಯಾಣ ಕರ್ನಾಟಕಾದ್ಯಂತ ಸಂಚರಿಸುತ್ತಿರುವ ಕಲ್ಯಾಣ ಕರ್ನಾಟಕ ವಿಕಾಸ ಪಥಯಾತ್ರೆಗೆ ಸೋಮವಾರ ಔರಾದ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ ಪೂಜೆಗೈದರು.
ಬಳಿಕ ಯಾತ್ರೆಗೆ ಭವ್ಯ ಸ್ವಾಗತ ಕೋರಿ ಮಾತನಾಡಿದ ಅವರು, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಕಲ್ಯಾಣ ನಾಡಿನ ಏಳ್ಗೆಗೆ ಹತ್ತು ಹಲವು ಯೋಜನೆಗಳು ಬಸವರಾಜ ಪಾಟೀಲ್ ಸೇಡಂಜೀರವರ ನೇತೃತ್ವದಲ್ಲಿ ನಡೆಯುತ್ತಿದ್ದು, ಯುವಕರು, ಮಹಿಳೆಯರಿಗೆ ಹೆಚ್ಚಿನ ಲಾಭವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಕಾಸ ಅಕಾಡೆಮಿ ಸಂಯೋಜಕ ರೇವಣಸಿದ್ದಪ್ಪ ಜಲಾದೆ, ಗುರುನಾಥ ವಟಗೆ, ಪ್ರಶಾಂತ ಶಿಂಧೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಘುಳೆ ಸೇರಿದಂತೆ ಇತರರಿದ್ದರು.