ಸಿಬಿಎಸ್ ಇ  ಸೌತ್ ಜೋನ್  ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಗೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೧೦; ಸಿಬಿಎಸ್ ಇ ಸೌತ್ ಜೋನ್ 2 ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ 2024  ಉದ್ಘಾಟನಾ ಕಾರ್ಯಕ್ರಮ ತೋಳಹುಣಸೆಯಲ್ಲಿರುವ ಪಿಎಸ್ ಎಸ್ ಇ ಎಂ ಆರ್ ಶಾಲೆಯಲ್ಲಿ ನಡೆಯಿತು.  ಚಾಂಪಿಯನ್ ಶಿಪ್ ಸ್ಪರ್ಧೆ ಉದ್ಘಾಟನೆ ಮಾಡಿದ ಶಾಲೆ ಮುಖ್ಯಸ್ಥರಾದ ಮಂಜುನಾಥ ರಂಗರಾಜು ಅವರು ಮಾತನಾಡುತ್ತಾ ಸೋಲು ಗೆಲುವು ಎಲ್ಲರಿಗೂ ಸಾಮಾನ್ಯ, ನಿಮ್ಮ ಸ್ಪರ್ಧೆ ಮುಖ್ಯ ಎಂದು ವಿದ್ಯಾರ್ಥಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪಥಸಂಚಲನ ಮತ್ತು ಶಿಸ್ತಿನ ಭಾಗವಹಿಸುವಿಕೆಯ ಪ್ರಮಾಣ ವಚನ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಸಿಬಿಎಸ್ಸಿ ವೀಕ್ಷಕರಾಗಿ ಆಗಮಿಸಿರುವ ಸಿದ್ದಪ್ಪ ಕಿರೆಸೂರ್ ಹಾಗೂ ವಿವಿಧ ಶಾಲೆಯ ಪ್ರಾಂಶುಪಾಲರುಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.