ಬಾವಗಿ ಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸಮಾರೋಪ
ಬೀದರ್: ಸೆ.10:ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಚಕ್ರಭಜನೇ ಮಾಹ ಮಂಗಳ ಹಾಗು ಕೊಟಿ ಬಿಲ್ವಾರ್ಚನೆ ಕಾರ್ಯಕ್ರಮ ನೂರಾರು ಭಕ್ತರ ಮಧ್ಯ ನಡೆಯಿತು
ಇಂದು ಬೆಳಗ್ಗೆ 8 ಗಂಟೆಗೆ ಗದ್ದುಗಿಗೆ ವೇದ ವಾದ್ಯಮೇಳದೊಂದಿಗೆ ಮಾಹರುದ್ರ ಅಭಿಷೇಕ ಪುಷ್ಪಾ ಅಲಂಕಾರ ನಂತರ ಕೊಟಿ ಬಿಲ್ವಾರ್ಚನೆ, ನಡೆಯಿತು ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಸೇರಿ ಭಕ್ತಿ ಸಮರ್ಪೀಸಿದರು ನಂತರ ಭಜನೆ ಕಾರ್ಯಕ್ರಮ ನೊಡುಗರ ಗಮನ ಸೆಳೆಯಿತು ನಂತರ ಮಾಹ ಪ್ರಸಾದ ಜರುಗಿತು.
ಶ್ರಾವಣ ಮಾಸವು ಭಾರತೀಯ ಸಂಸ್ಕøತಿ ಪರಂಪರೆ ಯಲ್ಲಿ ಶ್ರೇಷ್ಠವಾದದ್ದು ಮನಸಿಗೆ ಶಾಂತಿ ಕೋಡುವ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಕೋಟಿ ಬಿಲ್ವಾರ್ಚನೆ ಮಾಡಲಾಗಿದೆ ಎಂದು ಭದ್ರಯ್ಯ ಸ್ವಾಮಿ ನುಡಿದರು.
ಈ ಸಂದರ್ಭದಲ್ಲಿ ಗುರು ಭದ್ರೇಶ್ವರ ಸಂಸ್ಥಾನದ ಭದ್ರಯ್ಯ ಸ್ವಾಮಿ, ಶಾಂತಕುಮಾರ ಸ್ವಾಮಿ, ಶಿವಕುಮಾರ್ ಸ್ವಾಮಿ, ಮುಖಂಡರಾದ ಚನ್ನಮಲ್ಲಪ್ಪಾ ಹಜ್ಜರಗಿ, ರೇವಣಸಿದ್ದಪ್ಪಾ ಭದ್ರಣ, ಲೋಕೆಶ ಕನಶಟ್ಟಿ, ಮಾರುತಿ ಹುಗಾರ, ಶರಣಪ್ಪ ಮುದ್ದಾ,ಪ್ರಭು ಹಜ್ಜರಗಿ,ರಾಜಕುಮಾರ ಭದ್ರಣ, ಆನಂದ್ ಸ್ವಾಮಿ, ಸಾಗರ ಭದ್ರಣ, ಸಾಯಿನಾಥ ಭದ್ರಣ, ಸೇರಿ ಗ್ರಾಮದ ಮುಖಂಡರು ಯುವಕರು ಭಕ್ತರು ಹಾಜರಿದ್ದರು.