ಹೆಸರು ಕಾಳು ಖರೀದಿಗೆ ಚಾಲನೆ
ಶಿರಹಟ್ಟಿ, ಸೆ 10: ಪಟ್ಟಣದ ಟಿಎಪಿಎಮ್‍ಸಿ ಕಟ್ಟಡದಲ್ಲಿ ತಾಲೂಕ ಒಕ್ಕುಲುತನ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ರಾಜ್ಯ ಸಹಕಾರ ಮಾರಾಟ ಮಂಡಳಿ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಹೆಸರು ಕಾಳು ಬೆಂಬಲ ಬೆಲೆಯ ಯೋಜನೆಯ ಅಡಿಯಲ್ಲಿ ಖರೀದಿಗೆ ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ್ಯ ಬೆಲೆಯಲ್ಲಿ ಸರಕಾರ ಖರೀದಿಗೆ ಮುಂದಾಗಿದ್ದು, ಇದರ ಲಾಭವನ್ನು ರೈತರು ಪಡೆದುಕೊಳ್ಳಬೆಕು. ಅಧಿಕಾರಿಗಳು, ಸಹಕಾರ ಸಂಘದವರು ರೈತರಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಿ, ಅವರ ಹಿತ ಕಾಪಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ, ವಿಶ್ವನಾಥ ಕಪ್ಪತ್ತನವರ, ತಹಶೀಲ್ದಾರ ಅನೀಲ ಬಡಿಗೇರ, ರಾಜು ಕರಡಗಿ, ಚಂದ್ರು ನೂರಶೆಟ್ಟರ, ಶಿವಪ್ರಕಾಶ ಮಹಾಜನಶೆಟ್ಟರ, ನಾಗರಾಜ ಲಕ್ಕುಂಡಿ, ದೀಪು ಕಪ್ಪತ್ತನವರ, ಸಂದೇಶ ಗಾಣಿಗೇರ, ನಾಗರಾಜ ಕುಲಕರ್ಣಿ, ಫಕ್ಕಿರೇಶ ರಟ್ಟಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.