ಕಪ್ಪತಗುಡ್ಡ ಕನ್ನಡಿಗರ ಆಸ್ತಿ
ಧಾರವಾಡ,ಸೆ.10:ಕಪ್ಪತಗುಡ್ಡ 7 ಕೋಟಿಕನ್ನಡಿಗರಿಗೆ ಸೇರಿದ್ದು, ಇದುಕನ್ನಡಿಗರ ಆಸ್ತಿ, ‘ಒಂದೊಂದುಗಿಡಜೇನಿನ ಕೊಡ’ ಅದಕ್ಕಾಗಿ ನಾವು ಗಿಡಮರಗಳನ್ನು ಕಡಿಯಬಾರದು. ಪ್ರಕೃತಿಯಆರಾಧನೆ ಪರಮಾತ್ಮನಆರಾಧನೆಎಂದುಗದಗದ ಶಿವಕುಮಾರ ಸ್ವಾಮೀಜಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಶಿವಮೊಗ್ಗ, ಪರಿಸರಕ್ಕಾಗಿ ನಾವು ಧಾರವಾಡಜಿಲ್ಲೆ ಸಂಯುಕ್ತಆಶ್ರಯದಲ್ಲಿ ಆಯೋಜಿಸಿದ್ದ ‘ಸಹ್ಯಾದ್ರಿ-2024′ ಚಿಪ್ಕೋ-50, ಅಪ್ಪಿಕೋ-40 ಒಂದು ಮೆಲುಕು ಹಾಗೂ ಅರಣ್ಯಗಳು ಮತ್ತು ಸುಸ್ಥಿತ ಅಭಿವೃದ್ಧಿ, ಎರಡು ದಿನಗಳ ಚಿಂತನ-ಮಂಥನಕಾರ್ಯಕ್ರಮದಲ್ಲಿ 2ನೇ ದಿನದ 2 ನೇ ಗೋಷ್ಠಿಯಲ್ಲಿ’ಕಪ್ಪತಗುಡ್ಡಅರಣ್ಯ ಸಂರಕ್ಷಣೆ’ ಕುರಿತು ಮಾತನಾಡುತ್ತಿದ್ದರು.
ನಾವು ಅರಣ್ಯೀಕರಣ ಮಾಡಬೇಕಾಗಿದೆ.ಮಳೆ ನೀರುಕೊಯ್ಲು ಅಳವಡಿಸಿಕೊಳ್ಳಬೇಕಾಗಿದೆ.2003 ರಲ್ಲಿ ನಾವು ಪಟ್ಟಾಧಿಕಾರಿಗಳಾಗಿ ಬಂದಾಗಕಪ್ಪತಗುಡ್ಡ ದುಸ್ಥಿತಿಯಲ್ಲಿತ್ತು.ಈ ಕಪ್ಪತಗುಡ್ಡವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ಬಯಕೆ ನಮ್ಮದಾಗಿತ್ತು.ಕಪ್ಪತಗುಡ್ಡ 80 ಸಾವಿರಎಕರೆಇದ್ದು, ಗದಗಜಿಲ್ಲೆ ಮುಂಡರಗಿ, ಗದಗ ಮತ್ತು ಶಿರಹಟ್ಟಿ ತಾಲೂಕಿನತುಂಬ ಹಬ್ಬಿಕೊಂಡಿದೆ.ಎಪ್ಪತಗುಡ್ಡ ನೋಡುವುದಕ್ಕಿಂತಕಪ್ಪತಗುಡ್ಡ ನೋಡಎನ್ನುವ ಮಾತಿದೆ.ಅದುಅಕ್ಷರಶಃ ಸತ್ಯ. ಹಸಿರು ಮನಸಿನ ವ್ಯಕ್ತಿ. ಅಧಿಕಾರದೊಳಗಿದ್ರ ಭೂಮಿಯನ್ನು ಸ್ವರ್ಗ ಮಾಡುತ್ತಾರೆ.
ನಾವು ಗಣಿಗಾರಿಕೆ, ಚಿನ್ನತೆಗೆಯುವ ಕೆಲಸವನ್ನುತಡೆಯಬೇಕು.ಕಪ್ಪತಗುಡ್ಡ ಸಂಪೂರ್ಣವಾಗಿ ಏಳಿಗೆಯಾಗಬೇಕಿದೆ.ಅಲ್ಲಿಎಲ್ಲತರಹದ ಸಸ್ಯಗಳು, ಔಷಧಗಳು ಸಿಗುತ್ತವೆ. ಕಪ್ಪತಗುಡ್ಡದಲ್ಲಿ ಮಳೆಯಾದರೆ ಉತ್ತರಕರ್ನಾಟಕದ ಹಲವು ಭಾಗಗಳು ಉಳಿಯುತ್ತವೆ. ಕಪ್ಪತಗುಡ್ಡದಜೊತೆಎಲ್ಲ ಬೆಟ್ಟಗಳನ್ನು ಉಳಿಸಬೇಕು ಎಂದ ಶಿವಕುಮಾರ ಸ್ವಾಮಿಜಿಗಳು ಜನರೊಂದಿಗೆ ಸಂವಾದ ನಡೆಸಿಕೊಟ್ಟರು.
ಮೊದಲ ಗೋಷ್ಠಿಯಲ್ಲಿ ಶಿವಮೊಗ್ಗ ವರದಿ ಕುರಿತು ಮಾತನಾಡಿದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿ, ಪರಿಚಯಿಸಿದರು. ಶಂಕರ ಕುಂಬಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಸಂಜೀವಕುಲಕರ್ಣಿ, ವೀರಣ್ಣಒಡ್ಡೀನ, ಶಾರದಾ ಗೋಪಾಲ, ಕವಿತಾ ಎಲೆದಳ್ಳಿ, ಸರಸ್ವತಿ ಪೂಜಾರ, ಬಿ.ಎಂ.ಕುಮಾರಸ್ವಾಮಿ, ಬಾಲಚಂದ್ರ ಹೆಗಡೆ, ಡಾ.ಪ್ರಕಾಶ ಭಟ್, ಮನೋಜಕುಮಾರ, ನಿರ್ಮಲಾಗೌಡ, ಅಖಿಲೇಶ ಚಿಪ್ಪಳಿ, ಲಿನೆಟ್ ಡಿಸಿಲ್ವಾ ಸೇರಿದಂತೆ ಅನೇಕ ಪರಿಸರಕಾರ್ಯಕರ್ತರು ಭಾಗವಹಿಸಿಸದ್ದರು.