ಪೂರ್ವಭಾವಿ ಸಭೆ
ಲಕ್ಷ್ಮೇಶ್ವರ,ಸೆ.10: ತಾಲೂಕಾ ಪಂಚಾಯತಿಯ ಸಭಾಭವನದಲ್ಲಿ ಸೋಮವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ 17 ಕೀ.ಮಿ. ಮತ್ತು ಶಿರಹಟ್ಟಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ಕಿ.ಮಿ. ಮಾನವ ಸರಪಳಿ ರಚಿಸಲು ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ವಾಸುದೇವ ವಿ ಸ್ವಾಮಿ ಮತ್ತು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರು ಮಾತನಾಡಿ ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾಗಿ ಮಾನವ ಸರಪಳಿ ರಚಿಸಲು ನಿರ್ಧರಿಸಲಾಗಿದೆ ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ಮರುಳದಿಂದ ಆರಂಭವಾಗುವ ಮಾನವ ಸರಪಳಿ ಬಾಲೆ ಹಸೂರು ಸೂರಣಗಿ ನೆಲುಗಲ್ಲ ಬೆಳ್ಳಟ್ಟಿ ಮಾರ್ಗವಾಗಿ ಮುಂಡರಗಿ ತಲುಪಲಿದೆ ಅದೇ ರೀತಿ ಶಿರಹಟ್ಟಿ ತಾಲೂಕು ಪೆÇಲೀಸ್ ಠಾಣ ವ್ಯಾಪ್ತಿಯ 17 ಕಿ.ಮಿ ಮಾನವ ಸರಪಳಿ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಿಎಸ್‍ಐ ಈರಣ್ಣ ರಿತ್ತಿ ಅವರು ಸೆಪ್ಟೆಂಬರ್ 15ರಂದು ಹಾವೇರಿ ಜಿಲ್ಲೆಯ ಮರುಳದಿಂದ ಆರಂಭವಾಗುವ ಈ ಮಾನವ ಸರಪಳಿ 8 45ಕ್ಕೆ ಆರಂಭಗೊಳ್ಳಲಿದೆ ಆದ್ದರಿಂದ ಇದನ್ನು ಯಶಸ್ವಿಗೊಳಿಸಲು ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಸಂಘ ಸಂಸ್ಥೆಗಳು ವೇದಿಕೆಗಳ ಸದಸ್ಯರು ಪಾಲ್ಗೊಂಡು ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.