ದರ್ಶನ್ ಗೆ ಕಾಲ್ ಸಿಸ್ಟಮ್ ವ್ಯವಸ್ಥೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.10: ದರ್ಶನ್ ಗೆ ಹೈ ಸೆಕ್ಯುರಿಟಿ ಸೆಲ್‌ನಲ್ಲೇ ಪ್ರಿಸನ್ ಕಾಲ್ ಸಿಸ್ಟಮ್‌ಗೆ  ವ್ಯವಸ್ಥೆಯನ್ನು ಜೈಲು ಸಿಬ್ಬಂದಿ ಮಾಡಿದೆ.
ದರ್ಶನ್ ಸೇರಿದಂತೆ ನಾಲ್ವರು ಖೈದಿಗಳಿಗೆ ಕಾಲ್ ಸಿಸ್ಟಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿರೋ ನಾಲ್ವರು ಖೈದಿಗಳಿಗೆ ಭದ್ರತೆ ದೃಷ್ಟಿಯಿಂದ ಹೈ ಸೆಕ್ಯುರಿಟಿ  ಕಾಲ್ ವ್ಯವಸ್ಥೆ ಮಾಡಿರುವುದಾಗಿ ಜೈಲು ಸಿಬ್ಬಂದಿ ತಿಳಿಸಿದ್ದಾರೆ.
ಹಿಂದೆ‌ ಜೈಲು ಸಭಾಂಗಣಕ್ಕೆ ಪೋನ್ ಮಾಡ್ತಿದ್ದ ದರ್ಶನ್..ಸಮಾನ್ಯ ಖೈದಿಗಳ ಇರೋ ಪಕ್ಕದ ಬ್ಯಾರಕ್‌ನಲ್ಲಿ ಪೋನ್ ಕಾಲ್ ಸಿಸ್ಟಮ್ ವ್ಯವಸ್ಥೆ ಇತ್ತು..ಇತರೆ ಕೈದಿಗಳು ದರ್ಶನ್ ನೋಡಲು ಸಿಬ್ಬಂದಿಗಳ ಮುಂದೆ ಕಿರಿಕಿರಿ ಮಾಡುತ್ತಿದ್ದರಿಂದ ಇದೀಗ ಪೋನ್ ಕಾಲ್ ಸಿಸ್ಟಮ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.. ಹೊರಗಡೆ ಬಂದು ಕಾಲ್ ಮಾಡದಂತೆ ತಿಳಿಸಲಾಗಿದೆ. ಹೈ ಸೆಕ್ಯುರಿಟಿ ಸೆಲ್ ಮೂಲಕವೇ ಕುಟುಂಬಸ್ಥರಿಗೆ ಕಾಲ್‌ಗೆ ವ್ಯವಸ್ಥೆ ಮಾಡಿರುವುದಾಗಿ ಜೈಲಾಧಿಕಾರಿಗಳು ತಿಳಿಸಿದ್ದಾರೆ..
ಚಿಕನ್ ಊಟ
ದರ್ಶನ್ ಗೆ ಇವತ್ತು ಚಿಕನ್ ಊಟವನ್ನು ಜೈಲು ಸಿಬ್ಬಂದಿ ಕಲ್ಪಿಸಿದ್ದಾರೆ.. 250 ಗ್ರಾಂ ಚಿಕನ್, 3 ಚಪಾತಿ , ಸ್ವಲ್ಪ ಅನ್ನ, ಮಜ್ಜಿಗೆಯನ್ನು ಜೈಲು ಸಿಬ್ಬಂದಿ ದರ್ಶನ್ ಗೆ ನೀಡಿದ್ದಾರೆ.
ಜೈಲು ಮ್ಯಾನುವಲ್ ಪ್ರಕಾರ ಶುಕ್ರವಾರ ಚಿಕನ್ ಕೊಡಬೇಕಿತ್ತು. ಆದರೆ ಗಣಪತಿ ಹಬ್ಬ ಹಿನ್ನೆಲೆ ಶುಕ್ರವಾರ ಚಿಕನ್ ನೀಡಿರಲಿಲ್ಲ. ಹೀಗಾಗಿ ಇಂದು ಜೈಲಿನಲ್ಲಿ ಚಿಕನ್ ಊಟ. ದರ್ಶನ್ ಇರೋ ಬ್ಯಾರಿಕ್ ನಲ್ಲಿ ಊಟ ನೀಡಲಾಗಿದೆ.