ಹಬೋಹಳ್ಳಿ : ಪುರಸಭೆ ವತಿಯಿಂದ ಗಣೇಶ ವಿಸರ್ಜನೆಗೆ ನೀರಿನ ಹೊಂಡ ನಿರ್ಮಾಣ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.10 ಪಟ್ಟಣದ ಪುರಸಭೆ ವತಿಯಿಂದ ರಾಮನಗರ ಮತ್ತು ಹಳೆ ಊರಿನ ತಂಬ್ರಹಳ್ಳಿ ರಸ್ತೆಯ ಪಕ್ಕದಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕ ನೀರಿನ ಹೊಂಡ  ನಿರ್ಮಾಣ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್ ತಿಳಿಸಿದ್ದಾರೆ.
ಸಾರ್ವಜನಿಕರು ಗಣೇಶೋತ್ಸವ ನಂತರ ಪರಿಸರ ಗಣಪತಿಗಳನ್ನು ವಿಸರ್ಜನೆ ಮಾಡಲು ಪ್ರತಿ ವರ್ಷದಂತೆ ಈ ವರ್ಷವೂ ತಾತ್ಕಾಲಿಕ ಹೊಂಡ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಸಾರ್ವಜನಿಕರು ಇದರ ಉಪಯೋಗ ಮಾಡಿಕೊಳ್ಳುವ ಮೂಲಕ ಗಣೇಶನನ್ನು ಭಕ್ತಿ ಭಾವದಿಂದ ವಿಸರ್ಜಿಸಬೇಕು. ಪರಿಸರ ಗಣಪತಿಗಳಾದರೆ ನೀರಲ್ಲಿ ಕರಗಿ ಹೋಗುತ್ತವೆ. ಪರಿಸರವನ್ನು ಹಾಳಗೆಡುವ ಪಿಒಪಿ ಗಣಪಗಳನ್ನು  ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು, ಮತ್ತು ಮಾರಾಟ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಆದಷ್ಟು ಕಾಳಜಿ ಹೊಂದಿರಬೇಕು ಎಂದರು.
