ಮೌನಾನುಷ್ಠಾನ ಮಂಗಲೋತ್ಸವ
ಲಕ್ಷ್ಮೇಶ್ವರ,ಸೆ.10:ತಾಲೂಕಿನ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಮಹಾನ್ ತಪಸ ಡಾಕ್ಟರ್ ಕುಮಾರ್ ಮಹಾರಾಜರ ಮೌನಾನುಷ್ಠಾನ ಮಂಗಲೋತ್ಸವ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಮೌನ ಅನುಷ್ಠಾನದಿಂದ ಆತ್ಮ ಶುದ್ಧಿಗೊಳ್ಳುತ್ತದೆ ಮತ್ತು ಮಾನ್ ಶಕ್ತಿ ಸೃಷ್ಟಿಯಾಗುತ್ತದೆ ಮೌನಕ್ಕಿರುವ ಶಕ್ತಿ ಅಪಾರವಾಗಿದ್ದು ಎಂದು ಹೇಳಿದರು.
ಆತ್ಮ ಶುದ್ಧಿ ಮನಶುದ್ದಿ ಮೌನಾನು ಷ್ಠಾನದಿಂದ ಲಭಿಸುತ್ತದೆ ಆಧ್ಯಾತ್ಮಿಕವಾಗಿ ಶುದ್ಧೀಕರಿಸಿಕೊಳ್ಳುವುದಾಗಿದೆ ಮೌನಾನು ಷ್ಠಾನದಿಂದ ದೇವರನ್ನು ಬರಮಾಡಿಕೊಳ್ಳುವ ದೊಡ್ಡ ಸಂಕಲ್ಪವಾಗಿದೆ ಡಾಕ್ಟರ್ ಕುಮಾರ್ ಮಹಾರಾಜರು 12 ದಿನಗಳಿಂದ ಗಾಳಿ ಬೆಳಕು ನೀರು ಆಹಾರ ಪಂಚಭೂತಗಳಿಂದ ದೂರವಾಗಿ ಮೌನವನ್ನು ಷ್ಠಾನ ಮಾಡಿರುವುದು ನಿಜವಾಗಿಯೂ ದೊಡ್ಡ ಸಂಕಲ್ಪವಾಗಿದೆ. ಜ್ಞಾನವು ದೇವರ ನಾಮಸ್ಮರಣೆಯ ಏಕೈಕ ಆಸ್ತ್ರವಾಗಿದೆ ಶ್ರೀಗಳ ಮೌನಾನುಷ್ಠಾನ ತಪಶಕ್ತಿಯಿಂದ ಈ ಕ್ಷೇತ್ರ ದೊಡ್ಡ ಹೆಸರು ಮಾಡಲಿ ಎಂದ ಅವರು ಗವಿಸಿದ್ದೇಶ್ವರ ಮಠದ ಅಭಿವೃದ್ಧಿ ಕಾರ್ಯದಲ್ಲಿ ತಾವು ಬೆನ್ನೆಲುಬಾಗಿ ನಿಂತು ಎಲ್ಲ ರೀತಿಯ ಸಹಾಯ ಸಹಕಾರ ನೀಡುವದಾಗಿ ಪ್ರಕಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಸಮಾಧಾನ ಆಶ್ರಮದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣನವರು ಅಗಡಿಯ ಅಕ್ಕಿ ಮಟ್ಟದ ಗುರುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಶಾಸಕ ಡಾಕ್ಟರ್ ಚಂದ್ರು ಲಮಾಣಿ ಮಾಜಿ ಶಾಸಕ ರಾಮಣ್ಣ ಲಮಾಣಿ ತಾಂಡ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ನಾಯಕ ಕೃಷ್ಣ ಸುಣಗಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಮಾಗಡಿ ಸುನಿಲ್ ಮಹಾಂತ ಶೆಟ್ಟರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗನಗೌಡ ಪಾಟೀಲ ತಹಶೀಲ್ದಾರ್ ವಾಸುದೇವ್ ವಿ ಸ್ವಾಮಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಸೇರಿದಂತೆ ಅನೇಕರಿದ್ದರು.
ಶಶಿಕಾಂತ ರಾಠೋಡ ಪ್ರಕಾಶ್ ಲಮಾಣಿ ರಮೇಶ್ ಲಮಾಣಿ ನಿರ್ವಹಿಸಿದರು.