ಅನರ್ಹ ಬಿಪಿಎಲ್ ರದ್ದು, ಎಪಿಎಲ್‌ಗೆ ಪರಿವರ್ತನೆಗೆ ಕ್ರಮ
ಕೋಲಾರ,ಸೆ,೧೦- ರಾಜ್ಯ ಸರ್ಕಾರ ಅನರ್ಹ ಬಿ.ಪಿ.ಎಲ್. ಪಡಿತರ ಕಾರ್ಡ್‌ದಾರರ ವಿರುದ್ದ ಕಾರ್ಯಚರಣೆಯನ್ನು ಪ್ರಾರಂಭಿಸಲಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಅನರ್ಹರ ಬಿ.ಪಿ.ಎಲ್ ಪಡಿತರರ ಕಾರ್ಡ್‌ಗಳನ್ನು ರದ್ದುಗೊಳಿಸಿ ಮಾನದಂಡದ ಆಧಾರದ ಮೇರೆಗೆ ಬಡತನ ರೇಖೆಗಿಂತ ಕೆಳಗಿರುವವರು ಯಾರೂ ಹಸಿವೆಯಿಂದ ಇರಬಾರದು ಎಂಬ ದೆಸೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಅನರ್ಹವಾದ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಇದಕ್ಕೆ ಸಮಿತಿಯನ್ನು ಶೀಘ್ರದಲ್ಲಿಯೇ ರಚನೆ ಮಾಡಲು ಸರ್ಕಾರ ಮುಂದಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು,
ಸಚಿವರು ಮಾದ್ಯಮದೊಂದಿಗೆ ಮಾತನಾಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಬಿ.ಪಿ.ಎಲ್. ಮಾನದಂಡಗಳನ್ನು ಗಾಳಿಗೆ ತೊರುವ ಮೂಲಕ ದುರ್‍ಬಳಕೆ ಮಾಡಿ ಕೊಳ್ಳುತ್ತಿರುವುದು ಸರ್ಕಾರಕ್ಕೆ ಸ್ವಷ್ಟವಾಗಿದೆ ಇದರಿಂದ ಸರ್ಕಾರವು ಎಚ್ಚೆತ್ತು ಕೊಂಡಿದೆ.
ಈಗಾಗಲೇ ನೀತಿ ಆಯೋಗವು ಈ ಕುರಿತು ತೀವ್ರ ಅಕ್ಷೇಪಣೆಯನ್ನು ವ್ಯಕ್ತಪಡೆಸಿದೆ. ಅದ್ದರಿಂದ ಸರ್ಕಾರವು ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಲು ಮುಂದಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಟ್ಟದಲ್ಲಿಯೇ ಸಮಿತಿಯನ್ನು ರಚನೆ ಮಾಡಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದರು.
ಈ ಸಂಬಂಧವಾಗಿ ಆಯಾಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳ ಜೊತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯ ಮಂತ್ರಿಗಳು ರಾಜ್ಯದಲ್ಲಿರುವ ಬಿಪಿಎಲ್ ಅಂಕಿ ಅಂಶಗಳ ಸಂಖ್ಯೆ ಬಗ್ಗೆ ದಿಗ್ಬ್ರಮೆ ವ್ಯಕ್ತ ಪಡೆಸಿದ್ದರು, ಅಲ್ಲದೆ ಹೊಸದಾಗಿ ಬಿಪಿಎಲ್ ಕಾರ್ಡ್‌ಗಳಾಗಿ ೨.೯೫ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳು ವಿಲೇವಾರಿಯಾಗ ಬೇಕಾಗಿದೆ ಎಂಬುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ೧,೧೩ ಕೋಟಿ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದೆ ಎಂದು ಹೇಳಿದರು.