ಮುಂಡ್ರಿಗಿ ಅರುಣ್ ಕುಮಾರ್  ಹರಗಿನಡೊಣಿ ಗಾದಿಅಹಿಂದ ಯುವ ಘಟಕಕ್ಕೆ ನೇಮಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಸೆ.10: ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಮುಂಡ್ರಿಗಿ ಅರುಣ್ ಕುಮಾರ್ ಹಾಗೂ ಗ್ರಾಮಾಂತರ ಅಧ್ಯಕ್ಷರನ್ನಾಗಿ ಹರಗಿನಡೊಣಿ ಗಾದಿ ಅವರನ್ನು  ಸಂಘದ ಜಿಲ್ಲಾಧ್ಯಕ್ಷ ಗೋನಾಳ್ ಎಂ.ತಿಮ್ಮಪ್ಪ ಅವರು ಆದೇಶದ ಮೇರೆಗೆ  ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಜಿ ಕನಕ  ನೇಮಕ‌ ಮಾಡಿದ್ದಾರೆ.
ನೇಮಕಗೊಂಡವರಿಗೆ  ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮತ್ತು ಆರ್ಥಿಕವಾಗಿ  ಮುಖ್ಯವಾಹಿನಿಗೆ ತರುವ,  ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಬೇಕೆಂದು ಕನಕ ಅವರು  ಹೇಳಿದ್ದಾರೆ.
ನಮ್ಮ ಸಮಾಜಿಕ  ಸೇವೆ ಪರಿಗಣಿಸಿ ಈ ಸ್ಥಾನ ನೀಡಿದ್ದು.  ಸಂಘದ  ಜಿಲ್ಲಾಧ್ಯಕ್ಷ ಗೋನಾಳ್ ಎಂ.ತಿಮ್ಮಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಜಿ ಕನಕ  ಸಂಘದ ಇನ್ನತರ  ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು   ಒಟ್ಟುಗೂಡಿಸಿ ಅದರ  ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ ನೇಮಕಗೊಂಡವರು.