ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ; ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ವಿಚಾರಣೆ
ಬೆಂಗಳೂರು,ಸೆ.೧೦- ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧ ಖ್ಯಾತ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ನನ್ನು ಬನಶಂಕರಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಮೇ.೨೬ ರಂದು ರಾತ್ರಿ ಪ್ರಾಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವ ಸರ್ಜಾಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿದ್ದ. ನಾಗೇಂದ್ರಗೆ ಸಾಥ್ ಕೊಟ್ಟಿದ್ದೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎನ್ನಲಾಗಿತ್ತು.
ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್‌ನಲ್ಲಿ ಟ್ರೇನ್ ಮಾಡುತ್ತಿದ್ದುದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್‌ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಸಂಚು ರೂಪಿಸಿ, ತಾವೇ ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದ ಆರೋಪ ಎದುರಾಗಿತ್ತು.
ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹಲ್ಲೆ ಮಾಡಿಸಿದ್ದರು. ತನಿಖೆ ವೇಳೆ ಅಶ್ವಿನ್ ಪಾತ್ರ ಇರೋದು ಬೆಳಕಿಗೆ ಬಂದಿತ್ತು. ಹೀಗಾಗಿ ಕರೆದು ವಿಚಾರಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ಬಂಧಿಸಲಾಗಿದೆ.
ಕಳೆದ ವರ್ಷ ಅಶ್ವಿನ್ ಹುಟ್ಟುಹಬ್ಬಕ್ಕೆ ಧ್ರುವ ಸರ್ಜಾ ಅವರು ದುಬಾರಿ ಟೊಯೊಟಾ ಫಾರ್ಚೂನರ್ ಕಾರು ಉಡುಗೊರೆ ನೀಡಿದ್ದರು.