ನಮ್ಮ ಸಂಸ್ಕೃತಿ,ಸಂಪ್ರಾದಯ ಉಳಿವಿಗೆ ಹಬ್ಬಗಳ ಆಚರಣೆ
ಕೋಲಾರ,ಸೆ. ೧೦- ನಮ್ಮ ಸಂಸ್ಕೃತಿ ಸಂಪ್ರಾಯಗಳನ್ನು ಉಳಿಸುವ ಸಲುವಾಗಿ ಹಬ್ಬಗಳನ್ನು ಹೆಚ್ಚಗಿ ಆಚರಿಸ ಬೇಗಾಗಿದ್ದು ಇದೇ ರೀತಿ ಪ್ರತಿ ವರ್ಷವು ಮುಂದುವರೆಸಿ ಕೊಂಡು ಹೋಗ ಬೇಕೆಂದು ಚಿತ್ರ ನಟ ಯುವ ರಾಜ್ ಕುಮಾರ್ ಕರೆ ನೀಡಿದರು.
ನಗರದ ಶ್ರೀ ಲೋಕಮಾನ್ಯ ತಿಲಕ್ ಸಾರ್ವಜನಿಕ ಗಣೇಶ ಸಮಿತಿ, ವಿಶ್ವಹಿಂದು ಪರಿಷತ್ ಹಾಗೂ ನಗರದ ವಿವಿಧ ಬಡಾವಣೆಗಳ ಸಂಘ,ಸಂಸ್ಥೆಗಳು ಸ್ಥಾಪಿಸಿದ್ದ ಗಣೇಶ ಮೂರ್ತಿಗಳ ವಿಷರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು,
ರಾಜ್ಯದ ಗಡಿಭಾಗವಾದ ಕೋಲಾರ ಜಿಲ್ಲೆಯು ತನ್ನದೇ ಆದಾ ಶ್ರೀಮಂತ ಇತಿಹಾಸವನ್ನು ಹೊಂದಿರುವ ಬಂಗಾರದ ಜಿಲ್ಲೆಯಾಗಿದೆ. ಪ್ರಸ್ತುತ ಬಂಗಾರ ಇಲ್ಲವಾದರೂ ಬಂಗಾರದಂತ ಜನರನ್ನು ಹೊಂದಿದೆ ಎಂಬುವುದು ರಾಜ್ಯದ ಜನತೆಗೆ ತಿಳಿದಿರುವ ವಿಷಯವಾಗಿದೆ. ನಗರದ ಅದಿದೇವತೆ ಕೋಲಾರಮ್ಮ ಆಶೀರ್ವಾದವನ್ನು ಬಂದ ಕೊಡಲೇ ಪಡೆದು ಕೊಂಡಿರುವೆ. ಸೋಮೇಶ್ವರ ದೇವಾಲಯವು ಅತ್ಯಂತ ಶಿಲ್ಪಕಲೆಗಳಿಂದ ಕೊಡಿದ ಪ್ರಾಚೀನ ಐತಿಹಾಸಿಕ ಹೊಂದಿರುವ ಜಿಲ್ಲೆಯಾಗಿದೆ. ಕೋಲಾರಕ್ಕೆ ಬರಬೇಕೆಂಬ ಬಹುದಿನದ ಕನಸು ನಿಮ್ಮಗಳ ಪ್ರೀತಿಯ ಆಹ್ವಾನದಿಂದಾಗಿ ಈಡೇರುವಂತಾಗಿರುವುದು ಹರ್ಷದಾಯಕವಾಗಿದೆ ಎಂದರು.
ನಮ್ಮಗಳ ಪ್ರಾಚೀನ ಸಂಸ್ಕೃತಿ ಸಂಪ್ರಾದಯಗಳನ್ನು ಪಾಲಿಸುವ ಮೂಲಕ ಲೋಕ ಕಲ್ಯಾಣಕ್ಕಾಗಿ ಗಣೇಶ ಹಬ್ಬವನ್ನು ಪ್ರತಿ ವರ್ಷವು ಇದೇ ರೀತಿ ಅದ್ದೂರಿಯಿಂದ ಆಚರಿಸುವುದನ್ನು ಮುಂದುವರೆಸ ಬೇಕೆಂದು ಕರೆ ನೀಡಿದರು.
ಮಾಜಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ ವರ್ಷದಿಂದ ವರ್ಷಕ್ಕೆ ಗಣೇಶ ಹಬ್ಬದಂದು ಪ್ರತಿಯೊಂದು ಬಡಾವಣೆಗಳಲ್ಲಿ ಸ್ಥಾಪಿಸ ಬೇಕು, ನಗರದ ಪ್ರತಿ ಮನೆ,ಮನೆಗಳಲ್ಲಿ ಆಚರಿಸುವಂತಾಗ ಬೇಕು, ನಾನು ಈಗಾ ಸಂಸದನಲ್ಲದೆ ಇದ್ದರೂ ದೇಶ ,ಧರ್ಮ, ಸಂಸ್ಕೃತಿ ,ಸಂಪ್ರಾಯಗಳನ್ನು ಮರೆಯದೆ ಪಾಲಿಸಲೇ ಬೇಕು, ಅವುಗಳು ಎಂದೂ ಮಾಜಿ ಅಗುವುದಿಲ್ಲ. ಹಾಗಾಗಿ ಜನಸಂಖ್ಯೆ ಬೆಳೆದಂತೆ ಗಣೇಶ ಮೂರ್ತಿಗಳ ಸ್ಥಾಪನೆಯೂ ಹೆಚ್ಚಾಗ ಬೇಕೇ ಹೊರತು ಕಡಿಮೆಯಾಗಲು ಅವಕಾಶ ಕಲ್ಪಿಸ ಬಾರದು ಎಂದು ತಿಳಿಸಿದರು.
ಇದೇ ಗಣೇಶನ ಹಬ್ಬದ ಮೂಲಕವೇ ನಾವೂಗಳು ದೇಶದ ಸ್ವಾತಂತ್ರ್ಯಕ್ಕೆ ಸಂಘಟನೆಯಾದೆವು ಎಂಬುವುದು ಭಾರತದ ಇತಿಹಾಸದ ದಾಖಲೆಯಾಗಿದೆ. ಸ್ವಾತಂತ್ರ್ಯಕ್ಕೆ ಮೊದಲು ನಾವುಗಳು ಸಂಘಟನೆಯಾಗಲು ಅವಕಾಶ ಕೊಡುತ್ತಿರಲಿಲ್ಲ. ಬಹಿರಂಗ ಸಭೆಗಳಿಗೆ ಅಸ್ಪದ ಕೊಡುತ್ತಿರಲಿಲ್ಲ. ಒಗ್ಗಟಿಗೆ ಅವಕಾಶ ನೀಡದೆ ನಮ್ಮನ್ನು ಒಡೆದು ಆಳುವ ಮೂಲಕ ಹಿಡಿತದಲ್ಲಿಟ್ಟು ಕೊಂಡು ತಮ್ಮ ಕಾರ್ಯ ಸಾಧನೆ ಮಾಡುತ್ತಿದ್ದರು ಎಂಬುವುದು ಎಲ್ಲರಿಗೂ ತಿಳಿದ ವಿಚಾರವೇ ಅಗಿದೆ ಎಂದರು.
ಈಗಾ ರಾಜ್ಯದಲ್ಲಿ ಅಂಥಹುದೇ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ ಗಣೇಶೋತ್ಸವಗಳಿಗೆ ಮುಕ್ತವಾಗಿ ಆಚರಿಸಲು ಹಲವಾರು ಅಡ್ಡಿ ಅತಂಕಗಳನ್ನು ಎದುರಿಸ ಬೇಕಾಗಿದೆ. ಶ್ರೀರಾಮಚಂದ್ರನ ದೇವಾಲಯದ ಉದ್ಘಾಟನೆಗೆ. ಡಿ.ಜೆ.ಮೆರವಣಿಗೆ ನಿರ್ಬಂಧ, ಭಜನೆಗೆ ಅನುಮತಿ ಪಡೆಯ ಬೇಕಾದ ಉಸಿರುಗಟ್ಟಿದ ವಾತವರಣವನ್ನು ನಿರ್ಮಿಸಲಾಗಿದೆ.ಇದಕ್ಕೆ ಕಾರಣ ನಮ್ಮತೆ ಏಕತೆ, ಒಗ್ಗಟು, ಸಂಘಟನೆಯ ಕೊರತೆ ಕಾರಣವಾಗಿರುವುದು ಎಂದು ಅಸಮಾಧನ ವ್ಯಕ್ತ ಪಡೆಸಿದರು,
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಆನಂತ ಜ್ಯೂವೆಲರ್‍ಸ್ ಡಿ.ಆರ್.ನಾಗರಾಜ್, ಸತ್ಯನಾರಾಯಣ ಜ್ಯುವೆಲರ್‍ಸ್ ವೆಂಕಟೇಶ್, ಬಿ.ಆರ್.ಎಂ.ಜ್ಯೂವೆಲರ್‍ಸ್ ಸಂತೋಷ್, ಮಂಜುನಾಥ್ ಮುದ್ದಪ್ಪ, ಬಜರಂಗದಳ ಬಾಬು, ಬಾಲಾಜಿ ಮುಂತಾದವರು ಹಾಜರಿದ್ದರು.