ಇಬ್ಬರು ಕಳ್ಳರ ಬಂಧನ: ಚಿನ್ನಾಭರಣ ವಶ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.10:– ಇಬ್ಬರು ಕನ್ನ ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ನಜರ್‍ಬಾದ್ ಪೊಲೀಸರು, 17 ಲಕ್ಷ ರೂ ಮೌಲ್ಯದ 245 ಗ್ರಾಂ ಚಿನ್ನಾಭರಣಗಳು ಮತ್ತು 2.5 ಕೆಜಿ ತೂಕದ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿದ್ದಾರ್ಥನಗರ ಸನ್ಮಾರ್ಗ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಸುಮಾರು 245 ಗ್ರಾಂ ಚಿನ್ನಾಭರಣಗಳು ಮತ್ತು 2 ಕೆ.ಜಿ 500 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರು ಆರೋಪಿಗಳನ್ನು ಸೆ.8ರಂದು ನಂಜನಗೂಡುನಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಆರೋಪಿಗಳು ನೀಡಿದ ಹೇಳಿಕೆಯ ಮೇರೆಗೆ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ನಜರ್‍ಬಾದ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ.ಎಂ ಪಿಎಸ್‍ಐ ಶ್ರೀನಿವಾಸ್ ಪಾಟೀಲ್, ನಟರಾಜು.ಪಿ, ಪ್ರೊ ಪಿಎಸ್‍ಐ ಶೇಖ್ ಫಿರೋಜ್, ಟಿಎಂಸಿ ವಿಭಾಗದ ಪಿಎಸ್‍ಐ ಚಂದ್ರಶೇಖರ್ ರಾವ್, ಸಿಬ್ಬಂದಿ ಪ್ರದೀಪ್.ಎಂ ಹಾಗೂ ಠಾಣಾ ಸಿಬ್ಬಂದಿಗಳಾದ ಪ್ರಕಾಶ್.ವಿ.ವಿ, ರಮೇಶ್.ಹೆಚ್, ಸತೀಶ್‍ಕುಮಾರ್.ಎಸ್.ಪಿ, ಸಂಜು.ಎಂ, ವೆಂಕಟೇಶ್, ಮೊಹಮ್ಮದ್ ಇಸ್ಮಾಹಿಲ್ ಪ್ರವೀಣ್ ಮತ್ತು ತಾಂತ್ರಿಕ ವಿಭಾಗದ ಕುಮಾರ್ ಕೈಗೊಂಡಿದ್ದಾರೆ.