ಸೆ. 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಉದ್ದನೆಯ ಮಾನವ ಸರಪಳಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.10-ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನುಇದೇ ಸೆಪ್ಟೆಂಬರ್ 15ರಂದು ಆಚರಿಸಲಾಗುತ್ತಿದ್ದು, ರಾಜ್ಯದ ಬೀದರ್‍ಜಿಲ್ಲೆಯ ಬಸವಕಲ್ಯಾಣದಿಂದ ಚಾಮರಾಜನಗg Àಜಿಲ್ಲೆಯವರೆಗೆಅತಿಉದ್ದದ ಮಾನವ ಸರಪಳಿ ರಚಿಸಲಾಗುತ್ತಿದೆ. ಈ ಮಹತ್ವದಕಾರ್ಯಕ್ರಮದಲ್ಲಿಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಲೋಕಸಭಾ ಸದಸ್ಯಸುನೀಲ್ ಬೋಸ್‍ಅವರು ಮನವಿ ಮಾಡಿದರು.
ನಗರದಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀಲ್ ಬೋಸ್‍ಅವರು ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಾಗರಿಕರಿಗೆ ಪ್ರಜಾ ಪ್ರಭುತ್ವ, ಸಂವಿಧಾನದ ಆಶಯಗಳನ್ನು ಒಳಗೊಂಡ ಜಾಗೃತಿ ಮೂಡಿಸುವಉದ್ದೇಶದಿಂದ ಸರ್ಕಾರ ಮಹತ್ವದಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆಪ್ಟೆಂಬರ್ 15ರಂದು ಬೆಳಿಗ್ಗೆ 8.30 ರಿಂದ 10.30ರವರೆಗೆ ಏಕಕಾಲದಲ್ಲಿ ಮಾನವ ಸರಪಳಿ ನಿರ್ಮಿಸುವಕಾರ್ಯಕ್ರಮವುರಾಜ್ಯಾದ್ಯಂತ ನಡೆಯಲಿದೆ. ಚಾಮರಾಜನಗರಜಿಲ್ಲೆಯಲ್ಲಿ 24 ಕಿ.ಮೀ ವ್ಯಾಪ್ತಿಯ ಮಾನವ ಸರಪಳಿ ರಚಿಸಲಾಗುತ್ತಿದ್ದು, 19,200 ಜನರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಚಾಮರಾಜನಗರಜಿಲ್ಲೆಯಆರಂಭದ ಸರಹದ್ದಾದ ಮೂಗೂರುಕ್ರಾಸ್‍ನಿಂದಚಾಮರಾಜನಗರ ಪಟ್ಟಣದ ಪಚ್ಚಪ್ಪ ವೃತ್ತದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಪಚ್ಚಪ್ಪ ವೃತ್ತದಿಂದ ಸುಮಾರು 1 ಕಿ.ಮೀವರೆಗೆಅಂದರೆ ವರ್ತಕರ ಭವನದವರೆಗೆ ಭಾರತದತ್ರಿವರ್ಣಧ್ವಜ ಹಿಡಿಯುವಕಾರ್ಯಕ್ರಮ ಸಹ ವಿಶೇಷವಾಗಿದೆ. ಸಂವಿಧಾನ ಪೀಠಿಕೆಓದುವುದು, ಸಸಿ ನೆಡುವುದು, ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದೆಎಂದು ಲೋಕಸಭಾ ಸದಸ್ಯರು ವಿವರಿಸಿದರು.
ಪ್ರಜಾ ಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭದ್ರ ಬುನಾದಿ ಮೇಲೆ ನಿಂತಿದೆ. ಈ ಭದ್ರ ಬುನಾದಿ ಬಲಿಷ್ಠವಾಗದಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಲಾರದು. ಆದ್ದರಿಂದ ಸಮಾನತೆ, ಸ್ವಾಂತ್ರಂತ್ರ್ಯ ಭ್ರಾತೃತ್ವದ ಆದರ್ಶಗಳು ಭಾರತ ಸಂವಿಧಾನ ಪೀಠಿಕೆಯ ಭಾಗವಾಗಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಈ ಬಗ್ಗೆ ಅರಿವು ಮೂಡಿಸುವದೊಡ್ಡ ಕೆಲಸವನ್ನು ಸರ್ಕಾರ ಹಮ್ಮಿಕೊಂಡಿದೆಎಂದರು.
2023ನೇ ಸಾಲಿನಲ್ಲಿ ಸಂವಿಧಾನ ಜಾಗೃತಿ ಜಾಥಾಕಾರ್ಯಕ್ರಮವನ್ನುಎಲ್ಲೆಡೆ ಯಶಸ್ವಿಯಾಗಿ ನಡೆಸಲಾಗಿತ್ತು. ವಿವಿಧ ಇಲಾಖೆಗಳ ಸಹಯೋಗದೊಂದಿಗೆಇದೇ ಸೆಪ್ಟೆಂಬರ್ 15ರಂದು ಉದ್ದನೆಯ ಮಾನವ ಸರಪಳಿ ರಚಿಸುವ ಮೂಲಕ ಆಚರಿಸಲಾಗುವಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆಜಿಲ್ಲೆಯಜನಪ್ರನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೋಟರಿಇಂಟರ್ ನ್ಯಾಷನಲ್, ಸಿವಿಲ್ ಸೊಸೈಟಿ, ಎನ್.ಜಿ.ಒ, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ಮಾಧ್ಯಮದವರು, ಎಲ್ಲಾರಾಜಕೀಯ ಪಕ್ಷದ ಮುಖಂಡರು, ಸಮುದಾಯದಯಜಮಾನರು, ಮುಖಂಡರು ಸೇರಿದಂತೆಎಲ್ಲಾ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್‍ಅವರುಕೋರಿದರು.
ಎಂ.ಎಸ್.ಐ.ಎಲ್.ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿಅವರು ಮಾತನಾಡಿಜಿಲ್ಲಾ ವ್ಯಾಪ್ತಿಯಲ್ಲಿರಚಿಸಲಾಗುವ 24 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣವುಅತ್ಯಂತ ಗಮನಸೆಳೆಯಲಿದೆ. ಮೂಗೂರುಕ್ರಾಸ್ ನಿಂದ ಆರಂಭವಾಗಲಿರುವ ಮಾನವ ಸರಪಳಿ ನಿರ್ಮಾಣದ ಪ್ರತೀ 100 ಮೀಟರ್ ಗೆ ವಿವಿಧಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತೀ 500ಮೀ ಓರ್ವತಾಲೂಕುಮಟ್ಟದಅಧಿಕಾರಿ ಹಾಗೂ ಪ್ರತಿ 1 ಕಿ.ಮೀಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ ಎಂದರು.
ಗಡಿಜಿಲ್ಲೆಚಾಮರಾಜನಗರದಲ್ಲಿ ಅತ್ಯಂತ ವಿಶಿಷ್ಟವಾಗಿ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 25 ಲಕ್ಷಜನರು ಭಾಗವಹಿಸುತ್ತಿದ್ದು, 10 ಸಾವಿರ ಸಸಿ ನೆಡಲಾಗುತ್ತಿದೆ. ಜಿಲ್ಲೆಯಜನರು ಈ ಅರ್ಥ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಮೋನಾ ರೋತ್‍ಅವರು ಮಾತನಾಡಿಜಿಲ್ಲೆಯಲ್ಲಿಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಗೆ ಪ್ರತಿಯೊಬ್ಬರ ಸಹಕಾರಅಗತ್ಯವಾಗಿದೆ. ಚಿಕ್ಕ ವಯಸ್ಸಿನ ಶಾಲಾ ಮಕ್ಕಳು ಭಾಗವಹಿಸುತ್ತಿಲ್ಲ. ಹಿರಿಯತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳದ್ದಾರೆ. ಅಧಿಕಾರಿಗಳಿಗೆ ಅಗತ್ಯಜವಾಬ್ದಾರಿ ನೀಡಲಾಗಿದೆಎಂದರು.
ಹೆಚ್ಚುವರಿಜಿಲ್ಲಾಧಿಕಾರಿಗೀತಾ ಹುಡೇದಅವರು ಮಾತನಾಡಿಜಿಲ್ಲೆಯಲ್ಲಿಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವಅತಿಉದ್ದದ ಮಾನವ ಸರಪಳಿಯಲ್ಲಿ ಎಲ್ಲರೂ ಭಾಗವಹಿಸಬೇಕು. ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಲು ಸಂಘ ಸಂಸ್ಥೆಗಳು, ಅಸೋಷಿಯೇಷನ್, ಸಹಕಾರ ಸಂಘ, ನೌಕರರ ಸಂಘ, ಎನ್.ಜಿ.ಒ, ಇತರೆ ಸಂಘಗಳು ಸೇರಿದಂತೆಇತರರು ಸಹ ಗೂಗಲ್ ಲಿಂಕ್hಣಣಠಿs://ಜಿoಡಿms.gಟe/WUಚಿಒಜಿzಕಿo8ಥಿ8ಇಥಿಐಟಿರಿ7ಬಳಸಿಯೂ ನೋಂದಣಿ ಮಾಡಿಕೊಳ್ಳಬಹುದುಎಂದು ತಿಳಿಸಿದರು.
ಇದೇ ವೇಳೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಲೋಗೊ ಒಳಗೊಂಡ ಬಿತ್ತಿ ಪತ್ರವನ್ನುಗಣ್ಯರು ಬಿಡುಗಡೆ ಮಾಡಿದರು. ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ. ಬಿ.ಟಿ.ಕವಿತಾ, ಇತರರು ಸುದ್ದಿಗೋಷ್ಠಿಯಲ್ಲಿಇದ್ದರು.