ಪಿರಿಯಾಪಟ್ಟಣಕ್ಕೆ ಸುರ್ವಣ ಕರ್ನಾಟಕ 50 ಸಂಭ್ರಮ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ. ಸೆ.10- ಪಿರಿಯಾಪಟ್ಟಣಕ್ಕೆ ಆಗಮಿಸಿದ ಸುರ್ವಣ ಕರ್ನಾಟಕ 50 ಸಂಭ್ರಮದ ಜೋತಿ ರಥದ ಮೆರವಣಿಗೆ ತಹಸೀಲ್ದಾರ್ ನಿಸರ್ಗ ಪ್ರಿಯಾ ಚಾಲನೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರಕ್ಕೆ ಆಮಗಿಸಿದ ರಥವನ್ನು ಅಲ್ಲಿನ ಗ್ರಾಮಪಂಚಾಯಿತಿ ಸದಸ್ಯರು ಸ್ವಾಗತಿಸಿದರು. ನಂತರ ಪಿರಿಯಾಪಟ್ಟಣತಾಲೂಕು ಪಂಚಾಯಿತಿ ಆವರಣದಲ್ಲಿ ಇದ್ದ ರಥವನ್ನು ಶನಿವಾರ ಬೆಳಿಗ್ಗೆ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸುವ ಮೂಲಕ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಕಲಾತಂಡದ ಮೆರವಣಿಗೆ ಕನ್ನಂಬಾಡಿಯಮ್ಮ ದೇವಾಲಯದಿಂದ ಹೊರಟರಥಕ್ಕೆ ತಹಸೀಲ್ದಾರ್ ನಿಸರ್ಗಪ್ರಿಯಾ ಕನ್ನಡ ಬಾವುಟ ಬೀಸುವುದರ ಮೂಲಕ ಚಾಲನೆ ನೀಡಿದರು. ಡೊಳ್ಳುಕುಣಿತ, ನಗಾರಿ ಮುಂತಾದ ಜಾನಪದ ಕಲಾತಂಡ ಗಳೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ದೊಂದಿಗೆ ಬಿ.ಎಂ.ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದು, ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ರಥವನ್ನು ಪೆÇನ್ನಂಪೇಟೆಕಡೆಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ನಿಸರ್ಗಪ್ರಿಯಾ ಪ್ರತಿಯೊಬ್ಬರು ಕನ್ನಡದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು ಸುರ್ವಣ ಕರ್ನಾಟಕ 50 ಈ ಸಂದರ್ಭದಲ್ಲಿ ಸರಕಾರದವತಿಯಿಂದ ಜಾಗೃತಿ ಜ್ಯೋತಿ ರಥವನ್ನು ಮಾಡುವ ಮೂಲಕ ಎಲ್ಲರಲ್ಲಿಯೂ ಕನ್ನಡಾಭಿಮಾನ ಮೂಡಿಸುವ ಉದ್ದೇಶವನ್ನು ಸರಕಾರ ಹೊಂದಿದ್ದು ಪ್ರತಿಯೊಬ್ಬರು ನಾಡುನುಡಿಯ ಬಗ್ಗೆ ಗೌರವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯಪರಿಷತ್ತು ಅಧ್ಯಕ್ಷ ನವೀನ್‍ಕುಮಾರ್ ಮಾತನಾಡಿ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡಾಭಿಮಾನವನ್ನು ಭಿತ್ತುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ದೊರಕಬೇಕು ಈನಿಟ್ಟಿನಲ್ಲಿ ನಮ್ಮನ್ನು ಆಳುವ ಸರಕಾರಗಳು ಚಿಂತನೆ ನಡೆಸಬೇಕು, ನಾಡು ನುಡಿಯ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಒಂದಾಗಾಗಿ ಹೋಗಬೇಕು ಆಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಒ ಸುನೀಲ್‍ಕುಮಾರ್, ಸಿಡಿಪಿಒ ಮಮತ, ಬಿಇಒ ರವಿಪ್ರಸನ್ನ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ, ಕಸಾಪ ಕಸಬಾ ಅಧ್ಯಕ್ಷ ಕಾಂತರಾಜು, ಮಾಜಿ ಕಸಾಪ ಖಜಾಂಜಿ ಬಿರ್ಲಾ ಹರೀಶ್, ಆರ್‍ಐ ಪಾಂಡು, ವಿಎ ಉಮೇಶ್, ಪುರಸಭೆ ಹೆಲ್ತ್ ಇನ್ಸಪೆಕ್ಟರ್‍ಗಳಾದ ಮೋಹನ್‍ಕುಮಾರ್, ಪ್ರದೀಪ್‍ಕುಮಾರ್, ಮೇಸ್ತ್ರಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.