ವಿಮಾ ಸಪ್ತಾಹದ ಅಂಗವಾಗಿ ಜಾಥಾ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.10: ಭಾರತೀಯ ಜೀವವಿಮಾ ನಿಗಮದ 68ನೇ ವಿಮಾ ಸಪ್ತಾಹದ ಅಂಗವಾಗಿ ನೂರಾರು ಎಲ್‍ಐಸಿ ಪ್ರತಿನಿಧಿಗಳು ಹಾಗೂ ಕಚೇರಿ ಸಿಬ್ಬಂದಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.
ಭಾರತೀಯ ಜೀವ ವಿಮಾ ನಿಗಮದ ಒಕ್ಕೂಟದ ಅಧ್ಯಕ್ಷ ಎಂ.ಎಸ್.ವಿಶ್ವನಾಥ್ ಮಾತನಾಡಿ ಸಾರ್ವಜನಿಕರು ಜೀವ ವಿಮಾ ನಿಗಮದಲ್ಲಿನ ಉತ್ತಮ ವಿಮೆಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ತಮ್ಮ ಜೀವಕ್ಕೆ ವಿಮೆ ಮಾಡಿಸಬೇಕು. ಮಾನವನಿಗೆ ವಿಮೆ ಅತಿ ಅವಶ್ಯಕವಾಗಿ ಬೇಕಾಗಿದ್ದು ವಿಮೆ ಅವರ ಕುಟುಂಬವನ್ನು ಆರ್ಥಿಕ ಸಂಕಷ್ಟಗಳಿಂದ ದೂರ ಮಾಡುತ್ತದೆ. ಆದ್ದರಿಂದ ಎಲ್ಲರೂ ತಪ್ಪದೇ ಜೀವವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಖೆಯ ಶಾಖಾಧಿಕಾರಿಗಳಾದ ನಂಜುಂಡನಾಯಕ್, ಉಪ ಶಾಖಾಧಿಕಾರಿ ನರಸಿಂಹನ್, ಆಡಳಿತಾಧಿಕಾರಿ ಶ್ರೀಧರ್, ಶಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು, ಎಲ್ಲಾ ಅಭಿವೃದ್ಧಿ ಅಧಿಕಾರಿಗಳು ಭಾರತೀಯ ಜೀವ ವಿಮಾ ನಿಗಮದ ಒಕ್ಕೂಟದ ಪ್ರದಾನ ಕಾರ್ಯದರ್ಶಿ ವಿ.ಸತ್ಯನಾರಾಯಣ. ಖಜಾಂಚಿ ಸಿ.ಎಚ್.ಅನಂತ ಗೌರವಾಧ್ಯಕ್ಷ ಕೆ.ಸುಬ್ರಹ್ಮಣ್ಯ ಒಕ್ಕೂಟದ ಎಲ್ಲಾ ನಿರ್ದೇಶಕರು, ಎಲ್ಲಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.