ಚಾ.ನಗರ ನಗರಸಭೆಯಲ್ಲಿ ಮತ್ತೆ ಅರಳಿದ ಕಮಲ: ಸಂಸದ, ಶಾಸಕರಿಗೆ ಭಾರಿ ಮುಖಭಂಗ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.10-ಚಾಮರಾಜನಗರ ನಗರಸಭೆಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪ್ಲಾನ್ ಸಕ್ಸಸ್‍ಆದ ಪರಿಣಾಮ ಗೆಲುವಿನ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಮುಗ್ಗರಿಸಿ ಬಿದ್ದು ಬಿಜೆಪಿ ಮತ್ತೊಮ್ಮೆ ಗೆಲುವಿನ ನಗೆ ಬೀರಿತು.
31 ಸದಸ್ಯ ಬಲದ ನಗರ ಸಭೆಯಲ್ಲಿ ಕಾಂಗ್ರೆಸ್‍ನ ಮೂವರು ಸದಸ್ಯರು ಗೈರಾದ ಪರಿಣಾಮ ಅನಾಯಸವಾಗಿ ಬಿಜೆಪಿ 2 ನೇ ಬಾರಿಗೆಗದ್ದುಗೆ ಏರಿತು. ಬಿಜೆಪಿಯ ಸುರೇಶ್ ನಾಯಕ ಅಧ್ಯಕ್ಷರಾಗಿ ಆಯ್ಕೆಯಾದರೆ,ಉಪಾಧ್ಯಕ್ಷರಾಗಿ ಮಮತಾ ಬಾಲಸುಬ್ರಹ್ಮಣ್ಯ ಆಯ್ಕೆಯಾದರು.
ಬಿಜೆಪಿ ಆಪರೇಷನ್ ರಿವರ್ಸ್ ಪ್ಲಾನ್ ಮಾಡಲು ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಫಲರಾದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಕೊನೆ ಘಳಿಗೆಯಲ್ಲಿ ಅಧಿಕಾರ ಕಳೆದುಕೊಂಡಿತು.
ನಗರಸಭೆಯ 31 ಹಾಗೂ ಸಂಸದ, ಶಾಸಕರ ಬಲದೊಂದಿಗೆ 33 ಸದಸ್ಯರ ಬಲವನ್ನು ಹೊಂದಿತ್ತು. ಓರ್ವ ಬಿಎಸ್ಪಿ ಸದಸ್ಯ ಹೆಚ್ಚು ಸಭೆಗೆ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸದಸ್ಯತ್ವ ರದ್ದುಗೊಳಿಸಿದ್ದರು.32 ಮಂದಿ ಸದಸ್ಯರ ಬಲ ಹೊಂದಿರುವ ನಗರಸಭೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಸುರೇಶ್, ಮಮತಾ ಹಾಗೂ ಕಾಂಗ್ರೆಸ್ ಪಕ್ಷದಿಂದಆರ್.ಎಂ. ರಾಜಪ್ಪ, ಅಬ್ರಾರ್ ಅಹಮದ್ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯP À್ಷ ಆಯ್ಕೆಯ ಪ್ರಕ್ರಿಯೆಯಲ್ಲಿ ಸದಸ್ಯರು ಕೈಎತ್ತುವ ಮೂಲಕ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮಹೇಶ್ ಅಧಿಕೃತವಾಗಿ ಘೋಷಣೆ ಮಾಡಿದರು.
ಬಿಜೆಪಿಯ ರಾಮಸಮುದ್ರ ಸುರೇಶ್ ಹಾಗೂ ಮಮತಾ 15 ಮತಗಳನ್ನು ಪಡೆದುಅಧ್ಯಕ್ಷ-ಉಪಾಧ್ಯಕ್ಷರಾದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಆರ್.ಎಂ.ರಾಜಪ್ಪ, ಎಸ್‍ಡಿಪಿಐ ಅಭ್ಯರ್ಥಿ ಅಬ್ರಾರ್ ಅಹಮದ್ ತಲಾ 14 ಮತಗಳನ್ನು ಪಡೆದು ಪರಾಜಿತರಾದರು. ಮೂವರುಕಾಂಗ್ರೆಸ್ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆಗೈರಾಗಿದ್ದು, ಮತ್ತೋರ್ವ ಕಾಂಗ್ರೆಸ್ ಸದಸ್ಯೆ ಚಂದ್ರ ಕಲಾ ಸಭೆಗೆ ಆಗಮಿಸಿ, ಬಿಜೆಪಿ ಪರವಾಗಿ ಕೈ ಎತ್ತಿದರು. ಬಿಜೆಪಿ ಸದಸ್ಯ ಮಹದೇವಯ್ಯ ಕಾಂಗ್ರೆಸ್ ಪರವಾಗಿ ಕೈ ಎತ್ತುವ ಮೂಲಕ ಕ್ರಾಸ್‍ಓಟ್ ಮಾಡಿದರು.
ಮೂವರುಕಾಂಗ್ರೆಸ್ ಸದಸ್ಯರುಗೈರು, ಇಬ್ಬರಿಂದಅಡ್ಡ ಮತದಾನ ! – ನಗರಸಭೆಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಮಧ್ಯಾಹ್ನ ನಡೆದಚುನಾವಣೆಯಲ್ಲಿಕಾಂಗ್ರೆಸ್‍ನ ಮೂವರು ಸದಸ್ಯರುಗೈರಾಗುವ ಮೂಲಕ ಬಿಜೆಪಿ ಗೆಲುವಿಗೆ ಕಾರಣರಾದರು.
ಕಾಂಗ್ರೆಸ್ ಸದಸ್ಯರಾದಆರ್.ಪಿ.ನಂಜುಂಡಸ್ವಾಮಿ, ನೀಲಮ್ಮ ಹಾಗೂ ಭಾಗ್ಯಮ್ಮ ಎಂಬವರುಗೈರಾದರು. ಇನ್ನು, ಬಿಜೆಪಿ ಸದಸ್ಯ ಮಹಾದೇವಯ್ಯಕಾಂಗ್ರೆಸ್ ಪರವಾಗಿ ಹಾಗೂ ಕಾಂಗ್ರೆಸ್ ಸದಸ್ಯೆಚಂದ್ರಕಲಾ ಬಿಜೆಪಿ ಪರವಾಗಿ ಕೈ ಎತ್ತುವ ಮೂಲಕ ಅಡ್ಡ ಮತದಾನ ಮಾಡಿದರು.ವಿಜಯೋತ್ಸವ :ಬಿಜೆಪಿ ನಗರಸಭೆಯಅಧಿಕಾರ ಹಿಡಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಗರಸಭೆಕಚೇರಿ ಮುಂದೆ ಜಮಾಯಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವಆಚರಣೆ ಮಾಡಿದರು.
ನೂತನಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ರಾಜ್ಯ ವಕ್ತಾರಅಶ್ವಥ್‍ನಾರಾಯಣ್, ಜಿಲ್ಲಾಧ್ಯಕ್ಷಸಿ.ಎಸ್. ನಿರಂಜನ್‍ಕುಮಾರ್, ಮಾಜಿ ಶಾಸಕ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕೇಂದ್ರ ಬರ ಪರಿಹಾರ ಸಮಿತಿ ಮಾಜಿಅಧ್ಯಕ್ಷ ಎಂ. ರಾಮಚಂದ್ರ, ಕಾಂಪೋಸ್ಟ್ ಮಾಜಿಅಧ್ಯಕ್ಷಎಸ್. ಮಹದೇವಯ್ಯ, ಕಾಡಾ ಮಾಜಿಅಧ್ಯಕ್ಷ ನಿಜಗುಣರಾಜು, ಮುಖಂಡರಾದ ಮಂಜುನಾಥಗೌಡ, ಡಾ. ಎ.ಆರ್. ಬಾಬು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ, ಮುಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಕಾರ್ಯದಶಿಗಳಾದ ನಟರಾಜು, ಶಿವು ವಿರಾಟ್, ಬಿಜೆಪಿ ಎಸ್‍ಟಿ ಮೋರ್ಚಾರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷಚಂದ್ರಶೇಖರ್, ಎಸ್ಸಿ ಮೋರ್ಚಾಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಮಾಧ್ಯಮ್ ಪ್ರಮುಖ್‍ಗಳಾದ ಮಂಜುನಾಥ್, ಕರಿನಂಜನಪುರ ವಿರೇಂದ್ರ, ಮುಖಂಡರಾದ ಕಪನಿ ನಾಯಕ, ಶಿವಣ್ಣ, ಸುಂದರರಾಜ್, ಉತ್ತುವಳ್ಳಿ ಮಹೇಶ್, ಬಂಗಾರನಾಯಕ, ಮಹೇಶ್ ಪಟೇಲ್, ಮಂಜುನಾಥ್ ಮೊದಲಾದವರು ಇದ್ದರು.