ಅನುಗ್ರಹ ಆಸ್ಪತ್ರೆ ಅಂಧರ ಬಾಳಿಗೆ ಸಂಜೀವಿನಿ:ಸಿದ್ದಲಿAಗಶ್ರೀ
ತಾಳಿಕೋಟೆ:ಸೆ.೧೦: ಮನುಷ್ಯನ ಎಲ್ಲ ದೇಹವು ಸದೃಢವಾಗಿದ್ದರೂ ಕೂಡಾ ಕಣ್ಣು ಕಾಣಿಸದಿದ್ದರೆ ಸದೃಢ ದೇಹವು ಯಾವುದೇ ಕ್ರೀಯಾತ್ಮಗಳಿಲ್ಲದೇ ನಶಿಸಿ ಹೋಗಲಿದೆ ಅಂತಹ ಅಂದರ ಬಾಳಿಗೆ ಬೆಳಕನ್ನು ನೀಡಿ ಜೀವನ ಒದಗಿಸುತ್ತಾ ಸಾಗಿರುವ ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಸೋಮವಾರರಂದು ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಲ್ಲಿ ಭಗತ್‌ಸಿಂಗ್ ಗೆಳೆಯವರ ಬಳಗದ ವತಿಯಿಂದ ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಹಾಗೂ ಅನುಗ್ರಹ ವಿಜನ್ ಪೌಡೇಶನ್ ಹಾಗೂ ಅನುಗ್ರಹ ಆಸ್ಪತ್ರೆ ವಿಜಯಪುರ ಹಾಗೂ ರೇಡ್ ಕ್ರಾಸ್ ಸಂಸ್ಥೆ ವಿಜಯಪುರ, ನೇತೃತ್ವದಲ್ಲಿ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕೀತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಮನುಷ್ಯನ ದೇಹಕ ಸಾಕಷ್ಟು ತೊಂದರೆಗಳು ಆಗಲಿ ಆದರೆ ಕಣ್ಣಿಗೆ ತೊಂದರೆಯಾದರೆ ಇಡೀ ಜೀವನವೇ ಕುರುಡು ಆಗಲಿದೆ ಅದನ್ನು ಸಂರಕ್ಷೀಸಿಕೊಳ್ಳುವದು ಪ್ರತಿಯೊಬ್ಬರ ಕರ್ತವಾಗಿದೆ ಕಣ್ಣಿನ ಬಗ್ಗೆ ನಿರ್ಲಕ್ಷವೆಂಬುದು ಬೇಡಾ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈಧ್ಯರಾಗಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಲಕ್ಷಾಂತರ ಬಡ ಜನರಿಗೆ ಕಣ್ಣನ್ನು ಒದಗಿಸಿದ ದೇವರೆಂದರೆ ತಪ್ಪಾಗಲಾರದು ಇಂದು ಆಯೋಜಿಸಲಾದ ಶಿಬಿರದ ನೇತೃತ್ವ ವಹಿಸಿರುವ ಅನುಗ್ರಹ ಆಸ್ಪತ್ರೆಯು ಎಲ್ಲ ಬಡ ರೋಗಿಗಳಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ ಶಸ್ತç ಚಿಕೀತ್ಸೆಗೆ ಆಯ್ಕೆಯಾದ ಫಲಾನುಭವಿಗಳನ್ನು ಸ್ವತಃ ತಾವೇ ಕರೆದುಕೊಂಡು ಹೋಗಿ ಶಸ್ತç ಚಿಕೀತ್ಸೆ ಮಾಡಿ ಮರಳಿ ತಾಳಿಕೋಟೆ ಪಟ್ಟಣಕ್ಕೆ ಕರೆದುಕೊಂಡು ಬಿಡುವ ಕಾರ್ಯಕ್ಕೆ ಮುಂದಾಗಿರುವದು ಆಸ್ಪತ್ರೆಯ ವೈಧ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಸಮಾಜಮುಖಿ ಕಾರ್ಯ ಎತ್ತಿ ತೋರಿಸುತ್ತಿದೆ ಎಂದ ಅವರು ಭಗತ್‌ಸಿಂಗ್ ಗೆಳೆಯರ ಬಳಗದವರು ಗಣೇಶ ಉತ್ಸವದ ಅಂಗವಾಗಿ ಬಡ ಜನರಿಗಾಗಿ ಉಚಿತ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಿ ಇನ್ನೋಬ್ಬರ ಜೀವಕ್ಕೆ ಆಸರೆಯಾಗುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಸಮಾರಂಭವನ್ನು ಉದ್ಘಾಟಿಸಿದ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಅವರು ಮಾತನಾಡಿ ಅತೀ ಹೆಚ್ಚು ಹೃದಯರೋಗ, ಸಕ್ಕರೆ ಕಾಯಿಲೆ ಹೊಂದಿದವರು ನಮ್ಮ ಭಾರತ ದೇಶದಲ್ಲಿದ್ದಾರೆ ಇದಕ್ಕೆ ಕಾರಣ ಬದಲಾದ ಆಹಾರ ಪದ್ದತಿ ಕಾರಣವಾಗಿದೆ ಬಾಲಾವಸ್ತೆಯಲ್ಲಿ ನಾವು ಕೆಲಸ ಮಾಡುತ್ತೇವೆ ಕ್ರಮೇಣ ಕೆಲಸದಿಂದ ಹಿಂದಕ್ಕೆ ಸರಿದು ಆಲಸ್ಯತನಬೆಳೆಸಿಕೊಳ್ಳುತ್ತಾ ಸಾಗುತ್ತೇವೆ ಇದರಿಂದ ಇಲ್ಲದ ರೋಗಗಳು ನಮ್ಮನ್ನು ಅಂಟಿಕೊಳ್ಳುತ್ತಾ ಸಾಗುತ್ತವೆ ನಮ್ಮ ದೇಹಕ್ಕೆ ಬೇಕಾದುದ್ದನ್ನು ಊಟ ನಾವು ಮಾಡುವದಿಲ್ಲಾ ನಮ್ಮ ನಾಲಿಗೆ ರುಚಿ ಯಾವುದು ಕೇಳುತ್ತದೆಯೋ ಆ ಊಟವನ್ನು ನಾವು ಮಾಡುತ್ತೇವೆ ಇದರಿಂದ ದೇಹದಲ್ಲಿ ಬದಲಾವಣೆಗಳು ಆಗುತ್ತಾ ಹೋಗಿ ಬಿಪಿ, ಶುಗರ್, ಹೃದಯಾಘಾತದಂತಹ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ ನಮ್ಮ ದೇಹ ಎಷ್ಟು ಶ್ರಮಪಡಿಸುತ್ತೇವೆಯೋ ಅಷ್ಟು ಆರೋಗ್ಯಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಕಣ್ಣಿನ ಬಗ್ಗೆ ಯಾರೂ ನಿಸ್ಕಾಳಜಿ ವಹಿಸಬಾರದು ಕಣ್ಣು ಮನುಷ್ಯನ ಇಡೀ ಜೀವನಕ್ಕೆ ಅತ್ಯಮುಲ್ಯವಾದ ಆಸ್ತಿಯಾಗಿದೆ ಕಣ್ಣಿನ ಬಗ್ಗೆ ಸ್ವಲ್ಪೆ ಯಾವುದೇ ತೊಂದರೆ ಕಂಡು ಬಂದರು ಆಸ್ಪತ್ರೆಯ ವೈಧ್ಯರನ್ನು ಬೆಟ್ಟಿಯಾಗಿ ಉಪಚಾರ ಪಡೆದುಕೊಳ್ಳಬೇಕೆಂದ ಅವರು ತಾಳಿಕೋಟೆಯ ಭಗತ್‌ಸಿಂಗ್ ಗೆಳೆಯರ ಬಳಗದವರು ಗಣೇಶೋತ್ಸವ ನಿಮಿತ್ಯ ರಕ್ತದಾನ ಶಿಬಿರದ ಜೊತೆಗೆ ಉಚಿತ ನೇತ್ರ ತಪಾಸಣೆ ಕಾರ್ಯ ಕೈಗೊಂಡು ಬಡವರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವದು ಶ್ಲಾಘನೀಯವಾಗಿದೆ ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಅನುಗ್ರಹ ಆಸ್ಪತ್ರೆಯು ಸದಾ ಕೈಜೋಡಿಸುತ್ತದೆ ಎಂದರು.
ಈ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ೧೫೦ ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರಲ್ಲದೇ ಈ ಶಿಬಿರದಲ್ಲಿ ೪೦ ಜನರನ್ನು ಶಸ್ತç ಚಿಕೀತ್ಸೆಗೆ ಆಯ್ಕೆ ಮಾಡಲಾಯಿತು. ಅದರಂತೆ ೪೦ ಜನರು ರಕ್ತದಾನ ಮಾಡಿದರು.
ಈ ಸಮಯದಲ್ಲಿ ವೇ.ವೆಂಕಟೇಶ ಗ್ರಾಂಪುರೋಹಿತ, ಡಾ.ವಿಜಯಕುಮಾರ ಕಾರ್ಚಿ, ಡಾ.ರವಿ ಅಗರವಾಲಾ, ಡಾ.ನಜೀರ ಕೋಳ್ಯಾಳ, ಶಿವಾನಂದ ಹೂಗಾರ, ಅಣ್ಣಾಜಿ ಜಗತಾಪ, ವಿರೇಶ ಬಾಗೇವಾಡಿ, ನಾನಾಗೌಡ ನಡುವಿನಮನಿ, ಜಯಸಿಂಗ್ ಮೂಲಿಮನಿ, ಅನುಗ್ರಹ ಆಸ್ಪತ್ರೆಯ ಎಂ.ಎA.ಬಿರಾದಾರ, ಮಹಾಂತೇಶ ಹುಜರಾತಿ, ರೇಣುಕಾ ಗಡೇದ, ಶಿವರಾಜ ಕಲಕೇರಿ, ಸ್ಪೂರ್ತಿ, ಹಾಗೂ ಭಗತ್‌ಸಿಂಗ್ ಗೆಳೆಯರ ಬಳಗದವರು ಉಪಸ್ಥಿತರಿದ್ದರು.