ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿ: ಡಾ ಸಿದ್ದಲಿಂಗಪ್ಪಾ ಪಾಟೀಲ್
ಚಿಟಗುಪ್ಪ:ಸೆ.೧೦: ಪಟ್ಟಣದ ಸಂತ ಶಿರೋಮಣಿ ಮಡಿವಾಳೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚಿಟಗುಪ್ಪ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಶಾಸಕರು ನನ್ನ ಮೊದಲು ಆದ್ಯತೆ ಶಿಕ್ಷಣ ಮತ್ತು ಶಿಕ್ಷಕರಿಗೆ, ಮೂಲಭತ ವ್ಯವಸ್ಥೆ ಕಾರಣ ಮನುಷ್ಯ ಏನನ್ನಾದರೂ ಸಾಧಿಸಬೇಕು ಅಂದರೆ ಅವನ ಹಿಂದೆ ಗುರು ಇರಬೇಕು ಜೊತೆಗೆ ಒಳ್ಳೆಯ ಶಿಕ್ಷಣ ಇರಬೇಕು ಎಂದರು. ಶಿಕ್ಷಕರು ಜ್ಞಾನದ ಸಮುದ್ರ ಇದ್ದ ಹಾಗೆ ಅವರಿಂದ ಅದೆಷ್ಟೋ ಮಕ್ಕಳು ಇಂದು ವಿವಿಧ ರಂಗದಲ್ಲಿ ಮಿಂಚಿನAತೆ ಪ್ರಕಾಶಗೊಳ್ಳುತ್ತಿದ್ದಾರೆ ಅಂತಹ ಬಲಿಷ್ಠವಾದ ಪ್ರತಿಭೆ ಶಿಕ್ಷಕರಲ್ಲಿ ಅಡಗಿರುತ್ತೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಹುಮನಾಬಾದ ಮತ ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ,ಮನೆಯಲ್ಲಿ ತಂದೆ-ತಾಯಿ ಹಾಗೆಯೇ ಶಾಲೆಯಲ್ಲಿ ಶಿಕ್ಷಕರು ಆ ಸ್ಥಾನ ತುಂಬುತ್ತಾರೆ. ಈ ಕಾರಣಕ್ಕೆ ದೇವರ ನಂತರದ ಸ್ಥಾನ ಶಿಕ್ಷಕರದು. ಅವರು ಪೂಜ್ಯನೀಯರು. ರೈತರ ನಂತರ ಶಿಕ್ಷಕ ಸಮೂಹವೇ ಶ್ರೇಷ್ಠವಾದದು ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಮಸ್ಯೆ ಏನೇ ಇರಲಿ, ಅವರ ಧ್ವನಿಯಾಗಿ ಕೆಲಸ ಮಾಡುವೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅವರ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ರಾಜಪ್ಪಾ ಜಮಾದರ್ ಮಾತನಾಡಿ ಶಿಕ್ಷಕರ ಸಮುದಾಯ ಭವನ ನಿರ್ಮಿಸಲು ೧ ಎಕರೆ ಅಥವಾ ೨ ಎಕರೆ ಜಮೀನು ಸಮುದಾಯ ಭವನಕ್ಕೆ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ನಿಮ್ಮಗೂ ೨೦ ಲಕ್ಷ ಅನುದಾನ ನೀಡುವುದ್ದಾಗಿ ಭರವಸೆ ನೀಡಿದ್ದರು ವಿಶೇಷ ಉಪನ್ಯಾಸ ಡಾ ಸಂಗಪ್ಪಾ ತೌಡೆ ಮಾತನಾಡಿ ಶಿಕ್ಷಕರ ಸೇವೆ ಅಪಾರವಾದ್ದು ಮಕ್ಕಳಿಗೆ ಶಿಕ್ಷಣದಿಂದ ಮಾತ್ರ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವೆಂದು ನುಡಿದರು
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ ಪ್ರಾಸ್ತಾವಿಕವಾಗಿ ಮಾತನಾಡಿದರು ವಿದ್ಯಾರ್ಥಿಗಳ ಸಾಧನೆ ಕುರಿತ್ತು ಮತ್ತು ಅವರ ಫಲಿತಾಂಶ ಕುರಿತ್ತು ವಿವರಿಸಿದ್ದರು. ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದವರಿಗೆ , ನಿವೃತ್ತ ಶಿಕ್ಷಕರಿಗೆ ಹಾಗೂ ಮರಣ ಹೊಂದಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು. ಪ್ರಥಮ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತ್ತು ಮಂಜುನಾಥ ಪಂಚಾಳ ತಹಸೀಲ್ದಾರರುಮಾತನಾಡಿ ಶಿಕ್ಷಕರು ಮಾರ್ಗದಲ್ಲಿ ನಡೆದ ವಿದ್ಯಾರ್ಥಿ ಜೀವನದ ಭವಿಷ್ಯ ಉಜ್ವಲವಾಗುತ್ತದೆ ಉನ್ನತ ಸ್ಥಾನಕ್ಕೆ ಹುಗಲು ಸಾಧ್ಯವಾಗುತ್ತದೆ ವಿದ್ಯಾರ್ಥಿಗಳು ಶಿಕ್ಷಕರನ್ನು ತಮ್ಮ ಜೀವನದಲ್ಲಿ ಎಂದು ಮರೆಯಬಾರದು ಎಂದರು ಲಕ್ಷ್ಮಿ ಶಂಕರೆಪ್ಪಾ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ್ ಚಿಟಗುಪ್ಪ ಮಾತನಾಡಿ ಶಿಕ್ಷಕರು ನಮ್ಮ ಮಾರ್ಗದರ್ಶಕರು ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಬುಬ್ ಪಟೇಲ್, ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಜಕುಮಾರ ಬೇಲೂರೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಅಶೋಕಕುಮಾರ್ ಮಹೇಂದ್ರಕ್ಕರ್, ಸಾವಿತ್ರಿಬಾಯಿ ಫುಲೇ ಶಿಕ್ಷಕಿಯರ ಸಂಘದ , ತಾಲೂಕ ಅಧ್ಯಕ್ಷೆ ಪ್ರೇಮಿಳಾ ರೆಡ್ಡಿ, ಅಕ್ಷರ ದಾಸೋಹ ಯೋಜನಾಧಿಕಾರಿ ಮಹಾವೀರ ಜಮಖಂಡಿ, ಪಂಡಿತ ಕಲ್ಯಾಣ, ಗೋಪಾಲ್ ಜಮಾದರ್, ಸೂರ್ಯಕಾಂತ ಹಾವಶೆಟ್ಟಿ, ಸುಧರ್ಶನ್ ವಿಶ್ವಕರ್ಮ, ಸಂಜೀವನ ಭೋಸ್ಲೆ, ಗುಂಡಪ್ಪ ಕೋರಿ, ವೀರಶೆಟ್ಟಿ ತಂಗಾ, ರಮೇಶ್ ಸಲಗರ, ರಾಜಶೇಖರ ಉಪ್ಪಿನ, ಪ್ರಭು ಕಾಂಚನಾಳ, ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ರಮೇಶ ಸಲಗರ ನಿರೋಪಿಸಿ ವಂದಿಸಿದರು.