ಪ್ರತಿಯೊಬ್ಬರು ಉತ್ತಮ ಆಹಾರ ಸೇವಿಸುವುದು ಅಗತ್ಯ
ಬಸವನಬಾಗೇವಾಡಿ:ಸೆ.೧೦:ಪ್ರತಿಯೊಬ್ಬ ವ್ಯಕ್ತಿಯು ಕೊನೆಯವರೆಗೆ ಉತ್ತಮ ಆರೋಗ್ಯವನ್ನು ಹೊಂದಿರಬೇಕಾದರೆ ಆಹಾರವು ಅವರ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.ಆದ್ದರಿಂದ ಉತ್ತಮವಾದ ಆಹಾರವನ್ನು ಸೇವಿಸುವುದು ಅಗತ್ಯವಿದೆಯೆಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ವಿ.ಸೂರ್ಯವಂಶಿ ಅವರು ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ.ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯಮಹಾವಿದ್ಯಾಲಯದಲ್ಲಿಇಂದು ಮಹಿಳಾವೇದಿಕೆ ಹಾಗೂ ವಿಜಯಪೂರಜಿಲ್ಲಾರೆಡ್ಕಾçಸ್ ಸಂಸ್ಥೆಯಅಡಿಯಲ್ಲಿರಾಷ್ಟಿçÃಯ ಪೌಷ್ಠಿಕಾಂಶ ಸಪ್ತಾಹ ಕಾರ್ಯಕ್ರಮದಲ್ಲಿಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿ ಮಾತನಾಡಿದಅವರುಶರೀರವನ್ನು ಸದೃಢವಾಗಿಡುವ ಒಳ್ಳೆಯ ಪೋಷಕಾಂಶವನ್ನೊಳಗೊAಡ ಆಹಾರವನ್ನು ಸೇವಿಸಬೇಕು.ನಮ್ಮ ಹಿರಿಯರುರಾಸಾಯನಿಕ ಮುಕ್ತ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದರು ಆದ್ದರಿಂದಅವರು ಬಲಿಷ್ಠವಾದ ಶರೀರವನ್ನು ಹೊಂದಿದ್ದರು.ಪ್ರತಿವರ್ಷ ಅಪೌಷ್ಠಿಕತೆಯಿಂದ ಸುಮಾರು ಮಕ್ಕಳು ಸಾವನ್ನಪ್ಪುತ್ತಿರುವುದುಕಂಡಾಗ ಇಂದಿನ ಆಹಾರದಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾಗಿದೆ.ರಾಸಾನಿಕಮುಕ್ತಆಹಾರ ಸೇವನೆ ಮಾಡಿದಾಗಮಾತ್ರಕೊನೆಗಾಲದವರೆಗೆಉತ್ತಮವಾದ ಶರೀರವನ್ನು ಕಾಯ್ದುಕೊಳ್ಳಲು ಸಾಧ್ಯವೆಂದುಅಭಿಪ್ರಾಯಪಟ್ಟರು.
ಮಹಿಳಾ ವೇದಿಕೆಯಕಾರ್ಯಾಧ್ಯಕ್ಷೆ ಡಾ.ಎಸ.ಬಿ.ಜನಗೊಂಡ ಮಾತನಾಡಿದರು. ವೇದಿಕೆಯ ಮೇಲೆ ಪ್ರೊ.ಎಮ್.ಕೆ.ಯಾದವ, ಪ್ರೊ.ಪಿ.ಎಸ್.ನಾಟಿಕಾರ, ಪ್ರೊ.ಜಯರಾಮರೆಡ್ಡಿ ಉಪಸ್ಥಿತರಿದ್ದರು.ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು. ಪ್ರೊ.ಎಸ್.ಜೆ.ಸೂರ್ಯವಂಶಿ ಅವರುಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.