ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ೨೦ ತಿಂಗಳಲ್ಲಿ ಪೂರ್ಣರೈತರ ಭೂಮಿಗೆ ಕೃಷ್ಣಾ ನದಿ ನೀರು : ಶಾಸಕ ಲಕ್ಷ್ಮಣ ಸವದಿ ಮಾಹಿತಿ
ಅಥಣಿ :ಸೆ.೧೦: ತಾಲೂಕಿನ ಪೂರ್ವ ಭಾಗದ ರೈತರ ಮಹತ್ವಾಕಾಂಕ್ಷೆಯ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಂದಿನ ೨೦ ತಿಂಗಳಲ್ಲಿ ಪೂರ್ಣಗೊಳಿಸಿ, ಈ ಭಾಗದ ರೈತರ ಕೃಷಿ ಭೂಮಿಗೆ ಕೃಷ್ಣಾ ನದಿಯ ನೀರು ಒದಗಿಸಲಾಗುವುದು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.ಅವರು ಕೊಟ್ಟಲಗಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ೨೦೨೨-೨೩ನೇ ಸಾಲಿನ ವಿವೇಕ ಯೋಜನೆಯಡಿಯಲ್ಲಿ ೧ ಕೋಟಿ ೫೦ ಲಕ್ಷ ರೂ, ವೆಚ್ಚದಲ್ಲಿ ಮಂಜೂರಾದ ೬ ಕೊಠಡಿಗಳ ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು
ತಾಲೂಕಿನ ಪೂರ್ವಭಾಗದ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇರುವುದಿಲ್ಲ. ಯೋಜನೆಗೆ ಮೀಸಲಿಟ್ಟ ೧೪೮೬ ಕೋಟಿ ರೂ, ಅನುದಾನದಲ್ಲಿ ಕಾಮಗಾರಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈಗಾಗಲೇ ಐಗಳಿ ಕ್ರಾಸ್ ಹತ್ತಿರ ಪೈಪುಗಳನ್ನು ತಯಾರು ಮಾಡಿ ಪೈಪುಗಳ ಜೋಡನೆಯ ಕೆಲಸ ಹಗಲು-ರಾತ್ರಿ ಎನ್ನದೇ ಭರದಿಂದ ನಡೆಯುತ್ತಿದೆ. ಈ ಭಾಗದ ರೈತರ ಬಾಳು ಬೆಳಗಲು ಇನ್ನು ೧೫ ದಿನಗಳಲ್ಲಿ ಯೋಜನೆಯ ಕಾಮಗಾರಿಯಂತೆ ಪೈಪುಗಳನ್ನು ನೆಲದಲ್ಲಿ ಹಾಕುವ ಕೆಲಸ ಪ್ರಾರಂಭಿಸಲಾಗುವುದು. ಅಂದು ಈ ಭಾಗದ ಎಲ್ಲ ರೈತರ ಸಮ್ಮುಖದಲ್ಲಿಯೇ ಪೂಜೆ ನೆರವೇರಿಸುವ ಮೂಲಕ ಭೂಮಿಯಲ್ಲಿ ಪೈಪಗಳನ್ನು ಹಾಕಲಾಗುವುದು. ಸುಮಾರು ೨೦ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿAದ ಲೋರ್ಕಾಪಣೆಗೊಳಿಸಿ ಕೃಷ್ಣಾ ನದಿಯ ನೀರನ್ನು ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದ, ಎಂದರು
ಮುಂದಿನ ಕೆಲ ದಿನಗಳಲ್ಲಿ ತಾಲೂಕಿನ ಕೊಕಟನೂರಿನಲ್ಲಿರುವ ಪಶು ವೈಧ್ಯಕೀಯ ಮಹಾ ವಿದ್ಯಾಲಯದ ತರಗತಿಗಳನ್ನು ಪ್ರಾರಂಭಿಸಲಾಗುವುದು. ಕೊಕಟನೂರಿನಲ್ಲಿ ಕೃಷಿ ಮಹಾ ವಿದ್ಯಾಲಯದ ಪ್ರಾರಂಭಿಸಲು ಪ್ರಸ್ತಾವನೆ ಮತ್ತು ಸುಮಾರು ೧೦ ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿಧ್ಯಾಲಯ ಸ್ಥಾಪನೆಗೆ ಶೀಘ್ರದಲ್ಲಿ ಮಂಜೂರಾತಿ ಪಡೆದುಕೊಂಡು ಮುಖ್ಯಮಂತ್ರಿಗಳ ಹಸ್ತದಿಂದ ಚಾಲನೆ ನೀಡಲಾಗುವುದು ಎಂದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಕ್ಷಣಕ್ಕೆ ತುಂಬಾ ಮಹತ್ವವಿದೆ ಶಿಕ್ಷಣ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಕೇವಲ ಅಕ್ಷರ ಜ್ಞಾನ ಪಡೆದುಕೊಂಡರೆ ಸಾಲದು, ಇಂದಿನ ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದು ಅವಶ್ಯವಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಮಕ್ಕಳಿಗೆ ಉತ್ತಮವಾದ ಉನ್ನತ ಶಿಕ್ಷಣ ಕೊಟ್ಟರೆ ಮಾತ್ರ ನಾವು ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ. ಜಗತ್ತಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸುವ ಛಲ ನಮ್ಮ ದೇಶದಲ್ಲಿದೆ. ನಮ್ಮ ದೇಶದ ಮಕ್ಕಳು ಉನ್ನತ ಮತ್ತು ಉತ್ಕೃಷ್ಟವಾದ ಶಿಕ್ಷಣ ಕಲಿಯುತ್ತಿದ್ದಾರೆ. ಬೇರೆ ದೇಶದಲ್ಲಿ ತನ್ನ
ಸಾಮರ್ಥ್ಯವನ್ನು ಹೆಚ್ಚಿಸಲು ಉನ್ನತ ಶಿಕ್ಷಣ ಅವಶ್ಯವಿದೆ. ಎಲ್ಲರೂ ಮಕ್ಕಳಿಗೆ ಉತ್ತಮ ಸಂಸ್ಕಾರದೊAದಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.
ಈ ವೇಳೆ ಮುಖಂಡ ಸಿದರಾಯ ಯಲ್ಲಡಗಿ ಮಾತನಾಡಿ, ಗ್ರಾಮದಲ್ಲಿ ಇನ್ನು ಕೆಲವು ಅಭಿವೃದ್ದಿ ಆಗಬೇಕಾದ ಕಾಮಗಾರಿಗಳನ್ನು ಕೂಡಲೇ ಮಂಜೂರಾತಿ ಪಡೆದುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಸಿದ್ದಪ್ಪ ದೊಡ್ಡನಿಂಗಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ ತೇಲಿ, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಪಿ ಆಯ್. ಬಂಡಾರಿ, ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಎಮ್. ಖೋಬ್ರಿ, ಮುಖಂಡರಾದ ಸಿದರಾಯ ಯಲ್ಲಡಗಿ, ಭಾರತಿ ಗುರವ, ವಿಶ್ವನಾಥ ಗಣಿ, ಅಪ್ಪಾಸಾಬ ಬಿರಾದಾರ, ಗುರು ಮುಗ್ಗಣ್ಣವರ, ಸಂಗಯ್ಯಾ ಪೂಜಾರಿ, ಶೇಖರ ನೇಮಗೌಡ, ಶ್ರೀಶೈಲ ನಾಯಕ, ವೆಂಕಣ್ಣ ಅಸ್ಕಿ, ನೀರಾವರಿ ಇಲಾಖೆಯ ಎಇಇ ಪ್ರವೀಣ ಹುಣಸಿಕಟ್ಟಿ, ಜಿಪಂ ಎಇಇ ವೀರಣ್ಣ ವಾಲಿ, ಪಿಎ??? ಚಂದ್ರಶೇಖರ ಸಾಗನೂರ ಸೇರಿದಂತೆ ಅನೇಕರು ಇದ್ದರು. ರಘು ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು. ಬಾಬಾಗೌಡ ಪಾಟೀಲ ನಿರೂಪಿಸಿದರು, ಸುರೇಶ ಮಜ್ಜಗಿ ವಂದಿಸಿದರು.
