ಮಳೆಯಿಂದ ಮನೆಗಳು, ರಸ್ತೆಗಳು/ಸೇತುವೆಗಳು ಹಾನಿಯಾದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಡಿ.ಸಿ ಸೂಚನೆ
ಕಲಬುರಗಿ:ಅ.3: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಮನೆಗಳು, ರಸ್ತೆಗಳು/ಸೇತುವೆಗಳು ಹಾನಿಯಾದ ಮತ್ತು ಮಣ್ಣು ಕೊಚ್ಚಿಕೊಂಡು ಹೋಗಿದ್ದು ಹಾಗೂ ಕೆಲವು ಸ್ಥಳಗಳಲ್ಲಿ ನೀರಿನ ರಬಸಕ್ಕೆ ಜನ/ಜಾನುವಾರುಗಳು ಕೊಚ್ಚಿಕೊಂಡು ಹೊಗಿ ಮೃತ ಪಟ್ಟಿರುವ ಘಟನೆಗಳು ಸಂಭವಿಸಿರುವ ಕುರಿತು ವರದಿಯಾಗಿದ್ದಾರೆ ಕೊಡಲೇ ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ಸಂಬಂದಪಟ್ಟ ಫಲಾನಿಭವಿಗಳಿ ತುರ್ತಾಗಿ ಸರಕಾರದ NDRF/SDRF ಮಾರ್ಗಸೂಚಿನ್ವಯ ಪರಿಹಾರ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು
ಗುರುವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿನ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಭಾರಿ ಮಳೆಯಿಂದ ಹಾನಿಯಾದ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
.
ಅಕ್ಟೋಬರ್ ಮತ್ತು ಡಿಸೆಂಬರ್ ರಾಜ್ಯ ಬಹುತೇಕ ಭಾಗಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆ ಆಗುವ ಭಾರತೀ ಹವಾಮಾನ ಮುನ್ಸೂಚನೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಯಂತೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ನದಿಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಒಡಾಡದ ರೀತಿಯಲ್ಲಿ ತಾವುಗಳು ಕ್ರಮವಹಿಸಬೇಕು ಸಾರ್ವಜನಕರಿಗೆ ಯಾವುದೇ ಹಾನಿಕರ ಘಟನೆಗಳು ಆಗದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
ಜಿಲ್ಲೆಯ 356 ಗ್ರಾಮಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ಗ್ರಾಮಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳ ಜತೆ ಸಭೆಗಳನ್ನು ಮಾಡಿ ಪ್ರವಾಹದ ಕುರಿತು ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು ಮುಂದಿನ ಐದು ದಿನಗಳಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಿಂದ ವ್ಯಾಪಕ ಹಾನಿ ತುಂತುರ ಮಳೆ ಹಾಗೂ ಸಾಧರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚಂದ್ರಪಳ್ಳಿ ಜಲಾಶಯದ ಜಲಾಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಒಳಹರಿವು ಬರುತ್ತಿದೆ. ಚಂದ್ರಪಳ್ಳಿ ಆಣೆಕಟ್ಟಿನ ನದಿ ಪಾತ್ರ ರೈತರು, ಸಾರ್ವಜನಿಕರು, ರೈತ ಮಹಿಳೆಯರು, ದನಕರುಗಳು ನೀರು ಕುಡಿಸುವುದಾಗಲ್ಲಿ ಹಳ್ಳದಲ್ಲಿ ಇಳಿಯುವುದಾಗಲಿ ಮೀನು ಹಿಡಿಯುವುದಾಗಲು ಬಟ್ಟೆ ಒಗ್ಗೆಯುವುದಾಗಲ್ಲಿ ಇನ್ನಿತರ ಯಾವುದೇ ಕಾರಣಕ್ಕೆ ನದಿಯಲ್ಲಿ ಪಕ್ಕದಲ್ಲಿ ಬರಕೂಡದು ಎಂದು ಜಿಲ್ಲಾದಿಕಾರಿ ಎಚ್ಚರಿಕೆ ನೀಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಈ ಯೋಜನೆ ಒಟ್ಟು 204061 ರೈತರು ನೋಂದಣಿ ಮಾಡಿ ಕೊಂಡಿರುತ್ತಾರೆ, ಸ್ಥಳಿಯ ಪ್ರಕೃತಿ ವಿಕೋಪದಡಿ ಒಟ್ಟು 98253 ದೂರುಗಳು ಬಂದಿದ್ದು, ಅದರಲ್ಲಿ 45490 ದೂರುಗಳ ಸರ್ವೆ ಕಾರ್ಯ ಮುಗಿದ್ದು, ಉಳಿದ ಸರ್ವೆ ಕಾರ್ಯ 2-3 ದಿನದಲ್ಲಿ ಪೂರ್ಣಗೊಳ್ಳಿಸುವುದಾಗಿ ಜಿಂಟಿ ನಿರ್ಧೇಶಕರು ಕೃಷಿ ಇಲಾಖೆ ತಿಳಿಸಿದರು, ಅದಕ್ಕೆ ಜಿಲ್ಲಾಧಿಕಾರಿಗಳು ಕೊಡಲೇ ಎಲ್ಲಾ ಸ್ವಿಕೃತವಾದ ದೂರುಗಳ ಸರ್ವ ಕಾರ್ಯ ತುರ್ತಾಗಿ ಮುಗಿಸಿ ಸಂಬಂದಪಟ್ಟ ಎಲ್ಲಾ ರೈತ ಪಲಾನುಭವಿಗಳಿಗೆ ಬೆಳೆ ವಿಮೆ ಬರುವ ಹಾಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಈಗಾಗಲೇ ಸೆಪ್ಟೆಂಬರ್ ಮತ್ತು ಆಕ್ಟೋಬರ್ ಬೆಳೆಹಾನಿಯಾದ ಮಾಹಿತಿಯನ್ನು ತುರ್ತಾಗಿ ಪರಿಹಾರ ತಂತ್ತಾಂಶದಲ್ಲಿ ನಮೂದಿಸಲು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಯಿತು. ಜೂನ್ 1 ರಿಂದ ಅಕ್ಟೋಬರ್ 1 ರವರೆಗೆ ಪರಿಹಾರ ಮಾಹಿತಿಯನ್ನು ಹಾನಿಯಾದ ಮನೆಗಳಿಗೆ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಂಡು ರೈತರ ಬೀಜ ರಸಗೊಬ್ಬರಗಳ ಕೊರತೆಯಾಗದಂತೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೂಚನೆ ನೀಡಿದರು.