ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಆಚರಣೆ
ಸಂಜೆವಾಣಿ ವಾರ್ತೆ
ತಿ.ನರಸೀಪುರ:ಅ.04: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನ ಪುರಸಭೆ ಕಛೇರಿ ಆವರಣದಲ್ಲಿ ಬುಧವಾರ ಆಚರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಅವರು ಸದಸ್ಯರು ಹಾಗೂ ಸಿಬ್ಬಂದಿಗಳ ಜೊತೆಗೂಡಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಬ್ಬರ ಭಾವ ಚಿತ್ರಕ್ಕೆ ಪೂಜಿ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಸಮುದಾಯ ಸಂಘಟಕ ಕೆ.ಮಹದೇವು ಅವರು ಸ್ಚಚ್ಚತಾ ಬೋದಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸದಸ್ಯ ತುಂಬಲ ಸಿ.ಪ್ರಕಾಶ್ ಭಾರತದ ಅಪ್ರತಿಮ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧಿಜೀಯವರು 2ನೇ ಅಕ್ಟೋಬರ್ 1869 ರಂದು ಜನಿಸಿದರು. ಈ ದಿನವನ್ನು ಭಾರತದಾದ್ಯಂತ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ಜಯಂತಿಯನ್ನು ಆಚರಿಸಲಾಗುತ್ತದೆ. ಬಾಪು ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ ಎಂದರು.
ಗಾಂಧಿಜೀ ರವರು ವಕೀಲರಾಗಿ, ರಾಜಕಾರಣಿಯಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ಹೋರಾಟಗಾರರಾಗಿ ಸೇವೆ ಸಲ್ಲಿಸಿದರು. ರಾಜಕೀಯ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಲು ಗಾಂಧಿಜೀ ರವರು ಅಹಿಂಸಾತ್ಮಕ ಪ್ರತಿಭಟನೆಯ (ಸತ್ಯಾಗ್ರಹ) ಸಿದ್ಧಾಂತಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಟ್ಟಿದ್ದಾರೆ. ಪ್ರಾಮಾಣಿಕತೆ, ಸಮರ್ಪಣೆ, ಸಹಿಷ್ಣುತೆ, ಸ್ವಯಂ ತ್ಯಾಗ, ಮತ್ತು ಸಹಯೋಗವು ಗಾಂಧಿಜೀಯವರ ಯೋಜನೆಯ ಭಾಗವಾಗಿದ್ದು, ಅವರ ದಾರಿಯಲ್ಲಿ ನಾವೇಲ್ಲ ಸಾಗಬೇಕಾಗಿದೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಟಿ.ಎಂ.ನಂಜುಂಡ ಸ್ವಾಮಿ ಮಾತನಾಡಿ, ಈ ದಿನ ದೇಶಾಧ್ಯಂತ ಇಬ್ಬರು ಮಹಾತ್ಮರುಗಳ ಜನ್ಮದಿನವನ್ನು ಆಚರಿಸುತ್ತಾ ಇದ್ದೇವೆ. ಇಬ್ಬರೂ ಕೂಡಾ ಮಹತ್ತರ ಕೆಲಸಗಳನ್ನು ಮಾಡಿದ ಕಾರಣ ಅವರನ್ನು ಮಹಾತ್ಮರನ್ನಾಗಿ ನಾವು ಕಾಣುತ್ತೇವೆ ಮಹಾತ್ಮ ಗಾಂಧೀಜಿ ಅವರು ಅನೇಕ ಕಷ್ಟಗಳನ್ನ ಸಹಿಸಿಕೊಂಡು. ನೆರೆಯ ರಾಷ್ಟ್ರಗಳಲ್ಲಿ ಆದಂತಹ ಅನೇಕ ಅನುಭವಗಳ ಆಧಾರದ ಮೇಲೆ ನಮ್ಮ ರಾಷ್ಟ್ರವನ್ನು ಕಟ್ಟುವಂತಹ ಅಪೂರ್ವವಾದ ಕೆಲಸವನ್ನು ಮಾಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡಾ ರಾಷ್ಟ್ರದ ಕುರಿತಾಗಿ, ರಾಷ್ಟ್ರದ ಅಭಿವೃದ್ಧಿಯ ಕುರಿತಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ವಸಂತಕುಮಾರಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಅಹಿಂಸೆಯ ತತ್ವವನ್ನು ನಂಬಿದ್ದರು ಮತ್ತು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅದನ್ನು ಆಚರಿಸಿದರು ಇಂದು ಮಹಾತ್ಮಾ ಗಾಂಧಿ ಜಯಂತಿಯನ್ನು ಪ್ರಪಂಚದಾದ್ಯಂತ ಅಹಿಂಸಾ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಪುರಸಭೆ ಸದಸ್ಯರಾದ ಬಾದಾಮಿ ಮಂಜು , ರೂಪಶ್ರೀ ಪರಮೇಶ್, ತೇಜಸ್ವಿನಿ ರಾಜು, ಮುಖಂಡರಾದ ಶ್ರೀಕಂಠ, ಪುಳ್ಳಾರಿ ಮಾದೇಶ್, ಆರ್.ಐ ಅಶೋಕ್, ಎಸ್.ಡಿ.ಎ. ರಾಜೇಂದ್ರ, ಜೆ. ಇ. ಸಿದ್ದಪ್ಪ, ಆರೋಗ್ಯಧಿಕಾರಿ ಮಧು, ವ್ಯವಸ್ಥಾಪಕ ಮಹೇಂದ್ರ ಸೇರಿದಂತೆ ಕಚೇರಿ ಸಿಬ್ಬಂದಿಗಳು ಇದ್ದರು.