ರಾಜ್ಯ ಪರಿಷತ್ ಸದಸ್ಯರಾಗಿ ಮಲ್ಲಿಕಾರ್ಜುನ್ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.04: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸಮಾಜಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024-29ನೇ ಅವಧಿಗೆ ನಡೆಯಲಿರುವ ರಾಜ್ಯ ಪರಿಷತ್ತು ಸದಸ್ಯರ ಚುನಾವಣೆಯಲ್ಲಿ ಸಾರಿಗೆ ಇಲಾಖೆ ತಾಂತ್ರಿಕ ಮತ್ತು ಅಧಿಕಾರಿ ವೃಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಟಿ.ಓ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿಕಾವಲು ಗ್ರಾಮದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಪ್ರಸ್ತುತ ನಾಗಮಂಗಲ ಮತ್ತು ಬೆಂಗಳೂರು ಕಚೇರಿಗಳ ಸಹಾಯಕ ಪ್ರಾದೇಶಿಕ ಸಾರಿಗೆ ಮುಖ್ಯ ಅಧಿಕಾರಿಯಾಗಿ ಹಾಗೂ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ತಾಲ್ಲೂಕಿನಲ್ಲೂ ತಮ್ಮದೇ ಆದ ಸಮಾಜಸೇವೆಯನ್ನು ಮಾಡುತ್ತಾ, ಸಂಕಷ್ಟದಲ್ಲಿರುವವರ, ನಿರ್ಗತಿಕರ, ಬಡವರ ಕಷ್ಟಗಳಿಗೆ ಸ್ಪಂಧಿಸಿ ಜನಾನುರಾಗಿಯಾಗಿರುವ ಸರಳ ಸ್ವಭಾವದ ಮಲ್ಲಿಕಾರ್ಜುನ್ ಅವಿರೋಧವಾಗಿ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ್ ರವರಿಗೆ ತಾಲ್ಲೂಕಿನ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.