ಮಹದೇಶ್ವರ ಬೆಟ್ಟದಲ್ಲಿ ಗೂಳಿ ಗುದ್ದಿ ಮಹಿಳೆ ಗಾಯ: ಆಸ್ಪತ್ರೆಗೆ ದಾಖಲು
ಸಂಜೆವಾಣಿ ವಾರ್ತೆ
ಹನೂರು ಆ 4 :– ತಾಲೂಕಿನ ಮಲೆ ಮಾದೇಶ್ವರನ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆಯ ಜಾತ್ರೆಗೆ ತೆರಳಿತ ಭಕ್ತರು ಅಡ್ಡ ನಮಸ್ಕಾರ ಮಾಡಿ ಬರುವಾಗ ಗೂಳಿ ಒಂದು ಗುದ್ದಿದ ಹಿನ್ನೆಲೆಯಲ್ಲಿ ಗಾಯಗೊಂಡ ಮಹಿಳೆ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪುಟ್ಟೇಗೌಡನ ದೊಡ್ಡಿ ದೊಡ್ಡಿರೇಗೌಡನ ಪತ್ನಿ ನಿಂಗಮ್ಮ70 ವರ್ಷ. ಇವರಿಗೆ ಗೂಳಿ ಗುದ್ಧಿ ದಾಖಲಾಗಿರುವ ವಯೋವೃದ್ದೆ. ಬುಧವಾರ ಮಧ್ಯಾಹ್ನ 12 ಗಂಟೆಯಲ್ಲಿ ಈ ಘಟನೆ ನಡೆದಿದೆ.
ಮಹಾಲಯ ಅಮಾವಾಸ್ಯೆಯ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರು ಅಂತರಗಂಗೆಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಅಡ್ಡ ನಮಸ್ಕಾರ ಮಾಡಿ ಬರುವಾಗ ದಿಢೀರನೆ ಗೂಳಿಯೊಂದು ಭಕ್ತರ ಗುಂಪಿನ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ನಾಲ್ಕೈದು ಮಂದಿ ಕೆಳಗೆ ಬಿದ್ದು ಎದ್ದು ಓಡಿದ್ದಾರೆ.
ವಯೋ ವೃದ್ಧೆ ನಿಂಗಮ್ಮ ಕೆಳಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಇವರನ್ನು ಮಲೆ ಮಾದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೆಗಾಲ ಪಟ್ಟಣದ ಉಪವಿಭಾಗ ಆಸ್ಪತ್ರೆಗೆ ಕರತಂದು ದಾಖಲು ಮಾಡಿದ್ದಾರೆ.ಚಿಕಿತ್ಸೆ ನೀಡಿದ ವೈದ್ಯರು ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ ಈಗಿನ ಸ್ಥಿತಿಯಲ್ಲಿ ಇದ್ದ ಇವರನು ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡ ಮಹಿಳೆಯ ಸಂಬಂಧಿಕರ ಇಚ್ಛೆಯಂತೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ವೈದ್ಯರು ಎಂಎಲ್ಸಿ ವರದಿಯನ್ನು ಪೆÇಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.
ಭಕ್ತರು ಹರಕೆ ಹೊತ್ತು ತಂದು ಬಿಟ್ಟ ಕರುಗಳೇ ಇಂದಿನ ಗೂಳಿಗಳು:
ಮಲೆ ಮಾದೇಶ್ವರನ ಭಕ್ತರು ಗಂಡುಕರು ಹಾಕಿದರೆ ಅದರಿಂದ ಪ್ರಯೋಜನವಿಲ್ಲ ಎಂದು ಹಾಗೂ ಗೋ ಹತ್ಯೆ ಕಾಯ್ದೆ ಹಿನ್ನೆಲೆ ಮಾರಾಟ ಮಾಡಲು ಸಾಧ್ಯವಿಲ್ಲವೆಂದು ಸಾಕಲಾಗದೆ ಹರಕೆಯ ಹೆಸರಿನಲ್ಲಿ ಮಲೆ ಮಾದೇಶ್ವರನ ಬೆಟ್ಟಕ್ಕೆ ತಂದು ಬಿಡುತ್ತಿದ್ದಾರೆ.ಬುತ್ತಿ ಅನ್ನ ಹಣ್ಣು ಹಂಪಲು ಬಿಸಾಕಿರುವುದನ್ನು ತಿಂದು ಗೂಳಿಗಳಂತೆ ಬೆಳೆಯುತ್ತಿವೆ. ಇವು ಮಾದಪ್ಪನ ಸನ್ನಿಧಿಯಲ್ಲಿ ಬೀಡಾಡಿ ದನಗಳಾದರೇ, ಭಕ್ತರ ಪಾಲಿಗೆ ಇವು ಬಸಪ್ಪ ಎಂತಲೂ ಪೂಜಿಸುತ್ತಾರೆ. ಈ ಬೀಡಾಡಿ ದನಗಳ ರೂಪದಲ್ಲಿ ಗೂಳಿಗಳಾಗಿ ಭಕ್ತರ ಮೇಲೇರಿಗಿ ಆಗಿಂದಾಗೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿವೆ.
ಮಲೆ ಮಾದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಬಿಡದಿ ದನ ಮತ್ತು ಗೂಳಿಗಳ ಹತೋಟಿಗೆ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ಈಗಲಾದರೂ ಪ್ರಾಧಿಕಾರ ಗೂಳಿಗಳನ್ನು ಹತೋಟಿ ಮಾಡಬೇಕಾಗಿದೆ ಎಂಬುದು ಭಕ್ತಾದಿಗಳ ಒತ್ತಾಯವಾಗಿದೆ.