ಮುಂದೊಂದು ದಿನ ನಾನೂ ಸಿಎಂ ಆಗುವೆ: ಸಚಿವ ಎಂ.ಬಿ. ಪಾಟೀಲ
ವಿಜಯಪುರ,ಸೆ.9:ಮುಂದೊಂದು ದಿನ ನಾನು ಸಿಎಂ ಆಗುವ ಆಸೆ ಇದೆ. ಆದರೆ ದುರಾಸೆ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಸಿಎಂ ಆದರೆ ಜನರಿಗೆ ಒಳ್ಳೆಯದು ಮಾಡುವೆ. ಇಲ್ಲಿಯ ಮಮದಾಪುರ ಕೆರೆ ತುಂಬಿರುವೆ. ನಾನು ಸಿಎಂ ಆದರೆ ಜಿಲ್ಲೆಯ ಜನರಿಗೆ ಸಂತೋಷವಾಗುತ್ತದೆ. ರಾಜ್ಯದ ಜನರಿಗೆ ಒಳ್ಳೆಯದ್ದು ಮಾಡುವೆ. ಇದೆಲ್ಲದಕ್ಕೂ ಪಕ್ಷದ ಹೈ ಕಮಾಂಡ್, ಶಾಸಕರು ನಿರ್ಧಾರ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಆಗಬೇಕು ಎಂದರೆ ಸ್ವಯಂ ಘೋಷಿತ ನಿರ್ಧಾರವಲ್ಲ. ಯಾರನ್ನೋ ತಗೆದು ಮುಖ್ಯಮಂತ್ರಿ ಮಾಡುವ ಕೆಲಸಕ್ಕೆ ಕೈ ಹಾಕುವ ಪ್ರಶ್ನೆಯೇ ಬರಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರೀ ಆಗಿದ್ದಾರೆ. ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಮುದೊಂದು ದಿನ ನಾನೂ ಸಿಎಂ ಆಗುತ್ತೆನೆ ಎಂದು ಇಂಗಿತ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್, ಪರಮೇಶ್ವರ ಎಲ್ಲರೂ ನಾವು ಒಂದೇ ಇದ್ದೇವೆ. ಸತೀಶ ಜಾರಕಿಹೊಳಿ ಅವರಿಗಿಂತ ನಾನು ಹಿರಿಯ. ಎಲ್ಲರಿಗಿಂತ ಹಿರಿಯ ಮಲ್ಲಿಕಾರ್ಜುನ ಖರ್ಗೆ, ಆರ್.ವಿ. ದೇಶಪಾಂಡೆÀ, ಸಿದ್ದರಾಮಯ್ಯನವರಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಈಗ ಖಾಲಿ ಇಲ್ಲ. ಹಾಗಾಗಿ ಮುಖ್ಯಮಂತ್ರಿ ಹುದ್ದೆ ಚರ್ಚೆ ಈ ಸಂದರ್ಭದಲ್ಲಿ ಅಪ್ರಸ್ತುತ ಎಂದರು.
ಆದರೆ ಸಚಿವ ಶಿವಾನಂದ ಪಾಟೀಲ ಅವರ ಸಹೋದರ ವಿಜುಗೌಡ ಪಾಟೀಲ ಮಾತನಾಡುತ್ತಿದ್ದಾರೆ. ನಮ್ಮ ಸಹೋದರ ಎಂ.ಬಿ. ಪಾಟೀಲರಿಗೆ ಬಬಲೇಶ್ವರ ಮತಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಶಿವಾನಂದ ಪಾಟೀಲ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ನಾನಲ್ಲ. ಎಸ್.ಎಂ. ಕೃಷ್ಣ ಅವರಿಗೆ ಶಿವಾನಂದ ಪಾಟೀಲ ಅವರು ಹಾಗೂ ಸೋರಗಾಂವಿ ಅವರು ಭೇಟಿಯಾಗಿದ್ದಾರೆ. ಆಗ ಎಸ್.ಎಂ. ಕೃಷ್ಣ ಅವರು ಶಿವಾನಂದ ಪಾಟೀಲ ಅವರೊಂದಿಗೆ ಮಾತನಾಡು ಎಂದರು. ಆಗ ನಾನು ಅವರಿಗೆ ಕರೆದು ಮಾತನಾಡಿದಾಗ ಶಿವಾನಂದ ಪಾಟೀಲ ಅವರು ನಾನು ಎಸ್.ಎಂ. ಕೃಷ್ಣ ಅವರ ಜೊತೆಗೆ ಮಾತನಾಡುತ್ತೇನೆ ಎಂದರು. ಅವರ ಮಧ್ಯೆ ಏನು ಮಾತುಕತೆಯಾಯಿತು ಎಂಬುವುದು ನನಗೆ ಗೊತ್ತಿಲ್ಲ ಎಂದರು.