ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಸಿ ನೆಟ್ಟ ಸಚಿವ,ಸಂಸದ
ಕಲಬುರಗಿ,ಸೆ.9:ನಾಗರಿಕ ವಿಮಾನಯಾನ ಇಲಾಖೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ವತಿಯಿಂದ ಸೆಪ್ಟೆಂಬರ್ 11 ಹಾಗೂ 12 ರಂದು ನವದೆಹಲಿಯಲ್ಲಿ ನಡೆಯಲಿರುವ 2 ನೆಯ ಏಷಿಯಾ ಪೆಸಿಫಿಕ್ ಸಚಿವ ಸಮ್ಮೇಳನದ ಹಿನ್ನೆಲೆಯಲ್ಲಿ ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಮುಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಸಸಿಗಳನ್ನು ನೆಟ್ಟು ನೀರೆರದರು.ಈ ಸಂದರ್ಭದಲ್ಲಿ ವಿಮಾನನಿಲ್ದಾಣ ನಿರ್ದೇಶಕ ಡಾ ಚಿಲ್ಕಾಮಹೇಶ್ ಸೇರಿದಂತೆ ಹಲವರಿದ್ದರು.