ಜಗದಂಬಾ ಮಂದಿರ ಗಣೇಶೋತ್ಸವದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ
ಕಲಬುರಗಿ,ಸೆ 9: ನಗರದ ಶಹಾಬಜಾರ್ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಜಗದಂಬಾ ಮಂದಿರದ ಗಣೇಶೋತ್ಸವದಲ್ಲಿ ಯುವಕ ಮಂಡಳಿ ವತಿಯಿಂದ ಸಮಾಜದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಸುಮಾರು 50 ರಿಂದ 60 ಮಕ್ಕಳು ಭಾಗವಹಿಸಿದರು.ದೀಪಾ ಕೈಲಾಶ ದಾಯಮ್ಮಾ, ಸೋನಾಕ್ಷಿ ರವಿಕಾಂತ ಓಜಾ ಅವರು ನಿರ್ಣಾಯಕರಾಗಿ ಆಗಮಿಸಿದರು.
ಯುವಕ ಮಂಡಳದ ಅಧ್ಯಕ್ಷ ಅನೀಲ ಮಿಸ್ಕಿನ್,ಉಪಾಧ್ಯಕ್ಷ ದೀಪಕ ಚುಡಾಮಣಿ,ಕಾರ್ಯದರ್ಶಿ ಯೋಗೇಶ ಚವ್ಹಾಣ, ಪದಾಧಿಕಾರಿಗಳಾದ ರಾಜು ಪವಾರ,ನಾಗರಾಜ ಹಬ್ಬಿಬ,ಶ್ರೀಶಾಂತ ಶಾಲಗರ,ವಿನಾಯಕ ಚುಡಾಮಣಿ ಸೇರಿದಂತೆ ಹಲವರು ಪಾಲ್ಗೊಂಡರು ಎಂದು ರವೀಂದ್ರಕುಮಾರ ಮೇಂಗಜಿ ತಿಳಿಸಿದ್ದಾರೆ.