ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಮಸ್ಯೆಗಳ ಸ್ಪಂದನೆಗೆ ಆಗ್ರಹ
ಕಲಬುರಗಿ,ಸೆ 9: ಕಲಬುರಗಿಯಲ್ಲಿ ಬರುವ 17 ರಂದು ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಯ ಬಗ್ಗೆ ಮತ್ತು ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ವಿಷಯಗಳಿಗೆ ವಿಶೇಷ ಸ್ಪಂದನೆ ನೀಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸೃಜಿಸುವದು. 371ನೇ(ಜೆ) ಕಲಂ ಖಂಡಿಕೆ 12(ಎ) ಪ್ರಕಾರ ವಿಶೇಷ ಸ್ಥಾನಮಾನದಡಿ ಬರುವ ಸಮಸ್ಯೆಗಳ ಮತ್ತು ಅಪಿಲುಗಳ ನಿವಾರಣೆಗೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸುವುದು. 371ನೇ (ಜೆ) ಕಲಂ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ಸುಮಾರು 30 ನೆನೆಗುದಿಗೆ ಬಿದ್ದಿರುವ ಅಂಶಗಳನ್ನು ಅನುಷ್ಠಾನಗೊಳಿಸಬೇಕು. ಕಲ್ಯಾಣ ಕರ್ನಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆ.ಕೆ.ಆರ್.ಡಿ.ಬಿ. ವತಿಯಿಂದ ದೂರದೃಷ್ಟಿಕೋನವನ್ನಿಟ್ಟುಕೊಂಡು 5 ವರ್ಷದ ಕ್ರಿಯಾ ಯೋಜನೆಯನ್ನು ರಚಿಸಿ ಕಾಲಮಿತಿಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
ನಂಜುಂಡಪ್ಪ ವರದಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ಒಂದು ಗ್ರಾಮ ಪಂಚಾಯತಿಯನ್ನು ಘಟಕ ಮಾಡಿಕೊಂಡು ಮೂಲ ಸೌಕರ್ಯಗಳು, ಆರೋಗ್ಯ ಸೇವೆಗಳು, ಆದಾಯದ ಮೂಲಗಳು ಸೇರಿದಂತೆ ಪ್ರಮುಖ ಸೂಚ್ಯಂಕಗಳನ್ನು ಗಮನದಲ್ಲಿಟ್ಟು ಕೊಂಡು ವೈಜ್ಞಾನಿಕ ರೀತಿಯಲ್ಲಿ ವರದಿ ತಯರಿಸಿಕೊಂಡು. ಆ ವರದಿಯ ಆಧಾರದಂತೆ ಕೆ.ಕೆ.ಆರ್.ಡಿ.ಬಿ.ಯ ಮೂಲಕ 5 ವರ್ಷದ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರಚಿಸುವುದು.
ಈಗಾಗಲೇ ಮುಖ್ಯಮಂತ್ರಿಯವರು ಕೇಂದ್ರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇಳಿರುವ ಪ್ಯಾಕೇಜ ಹಣಕ್ಕೆ ಪೂರಕವಾಗಿ ಕಲಬುರಗಿ ಕ್ಯಾಬಿನೆಟ್ ಮುಖಾಂತರ ಕೇಂದ್ರಕ್ಕೆ 10ಸಾವಿರ ಕೋಟಿ ಹಣ ವಿಶೇಷ ಪ್ಯಾಕೇಜ ನೀಡಲು ಒತ್ತಾಯಿಸುವುದು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಪಾರದರ್ಶಕತೆಯಂತೆ ಗುಣಮಟ್ಟದ ಕಾರ್ಯಗಳು ನಡೆಯಲು ಮತ್ತು ವಿಶೇಷ ನಿಗಾ ವಹಿಸಲು ಮಂಡಳಿಯಡಿ ಒಂದು ಮೇಲ್ವಿಚಾರಣಾ ಸಮಿತಿ, ಎರಡನೆಯದು ಮೌಲ್ಯಮಾಪನ ಸಮಿತಿ, ಮೂರನೆಯದು ಜಾಗೃತದಳ (ವಿಜಿಲೆನ್ಸ್ ಕಮಿಟಿ) ರಚಿಸುವುದು ಸೇರಿದಂತೆ 21 ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಸವರಾಜ ದೇಶಮುಖ,ಪೆÇ್ರ. ಆರ್.ಕೆ. ಹುಡಗಿ, ಪೆÇ್ರ. ಬಸವರಾಜ ಕುಮನೂರ, ಡಾ. ಮಾಜಿದ್ ದಾಗಿ, ಮನೀಷ್ ಜಾಜು, ಡಾ. ಗಾಂಧೀಜಿಮೊಳಖೆರೆ,ಸುನೀಲ ಕುಲಕರ್ಣಿ, ಅಶೋಕ ಗುರುಜಿ ಅಬ್ದುಲ ರಹೀಂ, ಅಸ್ಲಂ ಚೌಂಗೆ ಉಪಸ್ಥಿತರಿದ್ದರು.