ವಿಜಯಪುರ: ಚಾಕುವಿನಿಂದ ಇರಿದು ಓರ್ವನ ಬರ್ಬರ ಹತ್ಯೆ
ವಿಜಯಪುರ, ಸೆ.9 :ಕುಡಿದ ನಶೆಯಲ್ಲಿ ಓರ್ವನು ತನ್ನ ಗೆಳೆಯನನ್ನೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಭಾನುವಾರ ತಡರಾತ್ರಿ ವಿಜಯಪುರ ನಗರದ ಮಹಾನಗರ ಪಾಲಿಕೆಯ ಬಳಿ ನಡೆದಿದೆ.
ಸಮೀರ ಬಡಿಗರ್ (40) ಹತ್ಯೆಯಾಗಿರುವ ದುರ್ದೈವಿ.
ಗೆಳೆಯ ವಿನಯ ಎಂಬಾತನಿಂದ ಕೃತ್ಯ ನಡೆದಿದೆ.
ಕುಡಿದ ನಶೆಯಲ್ಲಿ ಸಮೀರ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಜಲನಗರ ಪೆÇಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.