ಅಮೆರಿಕಾದಲ್ಲೂ ಗಣೇಶನ ಸಂಭ್ರಮ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.09: ಎಲ್ಲೇ ಇರು, ಹೇಗೇ ಇರು, ನೀನು ಎಂದೆಂದಿಗೂ ಭಾರತೀಯನಾಗಿರು ಎನ್ನವಂತೆ. ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಮರೆಯದೆ. ಗಣೇಶ ಹಬ್ಬವನ್ನು ವಿದೇಶಿ ಅಮೆರಿಕದಲ್ಲೂ ಸಡಗರ ಸಂಭ್ರಮದಿಮನದ ಆಚರಿಸಲಾಗಿದೆ.
ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿರುವ ಮೂಲತಃ ಬಳ್ಳಾರಿ ನಗರದ, ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ. ಬಸವರಾಜ್ ಅವರ  ಎರಡನೇ ಮಗ ಟಿ.ಹೆಚ್. ಎಮ್. ಪ್ರವೀಣ್  ಅವರು ತಮ್ಮ ನಿವಾಸದಲ್ಲಿ ಪತ್ನಿ ರಶ್ಮಿ ಪ್ರವೀಣ್, ಕುಮಾರಿ ದೃತಿ, ಕುಮಾರ ಅಥರ್ವ, ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಭಾರತೀಯರೊಂದಿಗೆ ಬೆರೆತು
ಶ್ರದ್ಧಾ ಭಕ್ತಿಯಿಂದ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.