ಅಥಣಿ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ : ಬಾಲಕ ಸ್ಥಳದಲ್ಲೇ ದುರ್ಮರಣ
ಅಥಣಿ:ಸೆ.9: ಅಥಣಿ ಪಟ್ಟಣ ಶಂಕರ ನಗರದ ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ರವಿವಾರ ಮಧ್ಯಾಹ್ನ ಜರುಗಿದೆ. ಕು. ಸೃಜನ್ ಸುನೀಲ ಭಂಡಗರ
(10 ವರ್ಷ) ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಪಟ್ಟಣದ ಶಂಕರ್ ನಗರದಲ್ಲಿರುವ ಟ್ಯೂಷನ್ ಕೇಂದ್ರದಲ್ಲಿ ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಂದು ಸೃಜನ ಭಂಡಗರ ಎಂಬ ಬಾಲಕ ಗೆಳೆಯರ ಜೊತೆ ಸರದಿ ಸಾಲಿನಲ್ಲಿ ರಸ್ತೆ ಬದಿ ನಿಂತಿದ್ದ. ಈ ವೇಳೆ ಅಥಣಿಯಿಂದ ಕಾರವಾರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಶರವೇಗದಲ್ಲಿ ಬಂದು ಹುಡುಗರ ಮೇಲೆಯೇ ಬರುತ್ತಿರುವುದನ್ನು ಕಂಡು ಕೆಲವು ಮಕ್ಕಳು ಓಡಿ ಹೋಗಿದ್ದು, ಸೃಜನ ಎಂಬ ಬಾಲಕನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಥಣಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.