ಪೊಲೀಸರಿಂದ ಪಟ್ಟಣದಲ್ಲಿ ಮಿಂಚಿನ ಪಥಸಂಚಲನ
ವಾಡಿ: ಸೆ.9:ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ವೇಳೆ ಯಾವುದೇ ಅಹಿತಕರ ಘಟನೆಗಳು ಜರಗದಂತೆ ಭದ್ರತಾ ಭಾವ ಮೂಡಿಸಲು ವಾಡಿ ಪೆÇಲೀಸ್ ಠಾಣೆ ವತಿಯಿಂದ ಪಟ್ಟಣದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪಥ ಸಂಚಲನ ಜರುಗಿತು.
ಪೆÇಲೀಸ್ ಠಾಣೆಯಿಂದ ಆರಂಭವಾದ ಪಥಸಂಚಲನ ಶ್ರೀನಿವಾಸ ಗುಡಿ ಚೌಕ, ಶಿವಾಜಿ ಚೌಕ್, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಮೌಲಾನಾ ಅಬುಲ್ ಕಲಾಂ ವೃತ್ತ ಸಹಿತ ಹಲವೆಡೆ ಪಥಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ನೇತೃತ್ವ ವಹಿಸಿದ್ದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ವಾಡಿ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಶಾಂತಿ ಮತ್ತು ವ್ಯವಸ್ಥಿತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗಿದರೆ ಪೆÇಲೀಸ್ ಇಲಾಖೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತದೆ. ಹಬ್ಬಗಳು ಭಕ್ತಿ ಭಾವ ಮೂಡಿಸಬೇಕು. ಪೆÇೀಲಿಸ್ ಇಲಾಖೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಜಾಗೃತವಾಗಿದೆ ಎನ್ನುವ ಸಂದೇಶ ಸಾರ್ವಜನಿಕರಿಗೆ ಮುಟ್ಟಿಸಲು ಪಥಸಂಚಲನ ನಡೆಸಲಾಗಿದೆ ಎಂದರು.
ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಸಿಪಿಐ ನಟರಾಜ್ ಲಾಡೆ, ಸಿಪಿಐ ಜಗದೇವಪ್ಪ ಪಾಳಾ, ವಾಡಿ ಠಾಣೆಯ ಪಿಎಸ್‍ಐ ತಿರುಮಲೇಶ್ ಕೆ. ಹಾಗೂ ವಿವಿಧ ಠಾಣೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.