ಪಿಎಸ್‍ಐ ಪರೀಕ್ಷೆ ಮುಂದೂಡಿ: ಕುಳಗೇರಿ ಆಗ್ರಹ
ವಿಜಯಪುರ,ಸೆ.9:ಸೆ. 22 ರಂದು ನಡೆಸಲಿರುವ ಪೆÇಲೀಸ್ ಸಬ್ ಇನ್ಸಪೆಕ್ಟರ್ (PSI) ಪರೀಕ್ಷೆಯ ದಿನಾಂಕವನ್ನು ಬದಲಾವಣೆ ಮಾಡುವಂತೆ ಎಬಿವಿಪಿ ಕರ್ನಾಟಕ ಉತ್ತರ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಅವರು ಆಗ್ರಹಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು ಸೆಪ್ಟೆಂಬರ್ 22ರಂದು ಪರೀಕ್ಷೆಯನ್ನು ನಡೆಸುತ್ತೇವೆ ಎಂದು ಮೊದಲೇ ದಿನಾಂಕವನ್ನು ಪ್ರಕಟಿಸಲಾಗಿತ್ತು, ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಪ್ಟಂಬರ್ 22ರಂದು 402 ಪೆÇಲೀಸ್ ಸಬ್ ಇನ್ಸಪೆಕ್ಟರ್(PSI) ಹುದ್ದೆಗಳ ಪರೀಕ್ಷೆಯನ್ನು ನಡೆಸುತ್ತೇವೆ ಎಂದು ದಿನಾಂಕವನ್ನು ಪ್ರಕಟಿಸಿದೆ. ಆದರೆ ಎರಡು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಲ್ಪನೆಯು ಇಲ್ಲದೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ ಕೆಇಎಯು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಸರಕಾರ ಹಾಗೂ ಪರೀಕ್ಷಾ ಪ್ರಾಧಿಕಾರವು ಕೂಡಲೇ ದಿನಾಂಕವನ್ನು ಬದಲಾವಣೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಪರೀಕ್ಷೆಗಳನ್ನ ನಡೆಸುವ ಪ್ರಾಧಿಕಾರವು ವಿದ್ಯಾರ್ಥಿಗಳ ಬೇರೆ ಪರೀಕ್ಷೆಗಳ ಮಾಹಿತಿಗಳು ಇದ್ದರೂ ಸಹಿತ ಅದೇ ದಿನ ಪರೀಕ್ಷೆಯನ್ನ ನಡೆಸುತ್ತೇವೆ ಎಂದು ದಿನಾಂಕವನ್ನು ಪ್ರಕಟಿಸಿದ ಅಧಿಕಾರಿಗಳ ನಿರ್ಧಾರವು ಅವೈಜ್ಞಾನಿಕವಾಗಿದೆ. ಕೂಡಲೇ ದಿನಾಂಕವನ್ನ ಬದಲಾವಣೆ ಮಾಡದೆ ಇದ್ದರೆ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.